ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಕಾರ್ ರ‍್ಯಾಲಿ: ಹೀರೊ ಮೋಟೊಸ್ಪೋರ್ಟ್ಸ್‌ ಐತಿಹಾಸಿಕ ಸಾಧನೆ

Published 19 ಜನವರಿ 2024, 17:12 IST
Last Updated 19 ಜನವರಿ 2024, 17:12 IST
ಅಕ್ಷರ ಗಾತ್ರ

ಯಾಂಬು, ಸೌದಿ ಅರೇಬಿಯಾ:  ಹೀರೊ ಮೋಟೊಸ್ಪೋರ್ಟ್ಸ್ ತಂಡವು ಶುಕ್ರವಾರ ಇಲ್ಲಿ ನಡೆದ ಡಕಾರ್ ರ‍್ಯಾಲಿಯಲ್ಲಿ ಚಾರಿತ್ರಿಕ ಸಾಧನೆ ಮಾಡಿತು. ಈ ರ‍್ಯಾಲಿಯಲ್ಲಿ ವಿಜಯವೇದಿಕೆ ತಲುಪಿದ ಭಾರತದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 

ಇಲ್ಲಿಯ ರ‍್ಯಾಲಿ 2ರಲ್ಲಿ ಟಿವಿಎಸ್ ರ‍್ಯಾಲಿ ಫ್ಯಾಕ್ಟರಿಯ ರೈಡರ್ ಹರಿತ್ ನೊಹಾ ಅವರು 11ನೇ ಸ್ಥಾನ ಗಳಿಸಿದರು. ಭಾರತದ ಮಟ್ಟಿಗೆ ಇದು ಕೂಡ ಪ್ರಥಮ ಸಾಧನೆಯಾಗಿದೆ.  ಅವರು ಒವರ್‌ ಆಲ್ ಬೈಕ್ ಕ್ಲಾಸ್ ರೇಸ್‌ನಲ್ಲಿಯೂ 11ನೇ ಸ್ಥಾನ ಪಡೆದರು.

ಹೀರೊ ಮೊಟೊಸ್ಪೋರ್ಟ್ಸ್ ತಂಡದ ರೈಡರ್ ರಾಸ್ ಬ್ರ್ಯಾಂಚ್ ಅವರು ರ‍್ಯಾಲಿಯಲ್ಲಿ ಎರಡನೇ ಸ್ಥಾನ ಪಡೆದರು. 12 ಹಂತಗಳಲ್ಲಿಯೂ ಸ್ಥಿರ ಪ್ರದರ್ಶನ ಕಾಯ್ದುಕೊಂಡ ಅವರು ಸತತವಾಗಿ ಮೊದಲ ಅಥವಾ ಎರಡನೇ ಸ್ಥಾನಗಳಲ್ಲಿದ್ದರು.  ಬ್ರ್ಯಾಂಚ್‌ 12ನೇ ಮತ್ತು ಫೈನಲ್ ಹಂತದಲ್ಲಿ (175 ಕಿ.ಮೀ)  ಒಂಬತ್ತನೇ ಸ್ಥಾನ ಪಡೆದರು. ಇದರಲ್ಲಿ ಒಂದು ಗಂಟೆ, 52 ನಿಮಿಷ ಮತ್ತು 42 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ ಎರಡನೇ ಸ್ಥಾನ ಪಡೆದರು.

ಸಮಗ್ರ ರ‍್ಯಾಂಕಿಂಗ್‌ನಲ್ಲಿ ಹೋಂಡಾ ತಂಡದ ರಿಕಿ ಬ್ರೆಬೆಕ್ ಅಗ್ರಸ್ಥಾನ ಗಳಿಸಿದರು. ಅವರು ಒಟ್ಟು 51 ಗಂಟೆ, 30 ನಿಮಿಷ ಮತ್ತು 8 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT