ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾರ್ವೆ ಚೆಸ್‌ ಟೂರ್ನಿ: ಪ್ರಜ್ಞಾನಂದಗೆ ಮಣಿದ ಕಾರ್ಲಸನ್

Published 31 ಮೇ 2024, 0:10 IST
Last Updated 31 ಮೇ 2024, 0:10 IST
ಅಕ್ಷರ ಗಾತ್ರ

ಸ್ಟೆವೆಂಜರ್, ನಾರ್ವೆ: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಮತ್ತೊಂದು ಮಹತ್ವದ ಸಾಧನೆಯನ್ನು ದಾಖಲಿಸಿದರು. 

ನಾರ್ವೆ ಚೆಸ್‌ ಟೂರ್ನಿಯಲ್ಲಿ ಪ್ರಜ್ಞಾನಂದ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲಸನ್ ಅವ ರನ್ನು ಮಣಿಸಿದರು. ಕ್ಲಾಸಿಕಲ್ ಮಾದರಿ ಯ ಚೆಸ್‌ನಲ್ಲಿ ಇದೇ ಮೊದಲ ಸಲ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ. 

ಆನ್‌ಲೈನ್ ಮತ್ತು ರ‍್ಯಾಪಿಡ್ ಮಾದರಿಗಳಲ್ಲಿ ಚೆನ್ನೈನ ಪ್ರಜ್ಞಾನಂದ ಅವರು ಕಾರ್ಲಸನ್ ಅವರನ್ನು ಈ ಹಿಂದೆ ಸೋಲಿಸಿದ್ದರು. ಆದರೆ ಈ ಬಾರಿ ಕ್ಲಾಸಿಕಲ್‌ನಲ್ಲಿ ಮ್ಯಾಗ್ನಸ್ ಅವರನ್ನು ಅವರದ್ದೇ ತವರಿನಲ್ಲಿ ಮಣಿಸಿದ್ದಾರೆ.  ಪ್ರಜ್ಞಾನಂದ ಅವರು 5.5  ಅಂಕಗಳೊಂದಿಗೆ ಪುರುಷರ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಮ್ಹಾಗ್ನಸ್ 3 ಅಂಕ ಗಳಿಸಿದ್ದಾರೆ.

ಅಮೆರಿಕದ ಹಿಕಾರು ನಕಾಪುರಾ, ಫ್ರಾನ್ಸ್‌ನ ಫಿರೌಜಾ ಅಲಿರೇಜಾ ಮತ್ತು ಚೀನಾದ ಡಿಂಗ್ ಲಿರೇನ್ ತಲಾ 2.5 ಅಂಕ ಗಳಿಸಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 

ಆರು ಆಟಗಾರರು ಇರುವ ಡಬಲ್‌ ರೌಂಡ್ ರಾಬಿನ್ ಸ್ಪರ್ಧೆ ಇದಾಗಿದೆ. ಕ್ಲಾಸಿಕಲ್ ಚೆಸ್ ನಿಧಾನಗತಿ ಯದ್ದಾಗಿದೆ.  ಆಟಗಾರರು ಯೋಚಿಸಿ ಯೋಜಿಸಲು ಬಹಳಷ್ಟು ಸಮಯ ದೊರೆಯುತ್ತದೆ. ಪಂದ್ಯವು ಕನಿಷ್ಠ ಒಂದು ಗಂಟೆಯಾದರೂ ನಡೆಯುತ್ತದೆ.  ಪ್ರಜ್ಞಾನಂದ ಮತ್ತು ಮ್ಹಾಗ್ನಸ್ ಅವರು ಈ ಹಿಂದೆ ಮೂರು ಸಲ ಈ ಮಾದರಿಯಲ್ಲಿ ಮುಖಾಮುಖಿಯಾದಾಗ ಡ್ರಾ ಮಾಡಿಕೊಂಡಿದ್ದರು. ಆದರೆ ಈ ಸಲ 18 ವರ್ಷದ ಪ್ರಜ್ಞಾನಂದ ಮೇಲುಗೈ ಸಾಧಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT