ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಹಾಕಿ ತಂಡ ಆಸ್ಟ್ರೇಲಿಯಾಕ್ಕೆ

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ
Published 2 ಏಪ್ರಿಲ್ 2024, 13:50 IST
Last Updated 2 ಏಪ್ರಿಲ್ 2024, 13:50 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷದ ಜುಲೈ– ಆಗಸ್ಟ್‌ನಲ್ಲಿ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆಯಾಗಿ ಭಾರತ ಪುರುಷರ ಹಾಕಿ ತಂಡ ಐದು ಪಂದ್ಯಗಳ ಹಾಕಿ ಟೆಸ್ಟ್‌ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿತು.

ಸರಣಿಯ ಮೊದಲ ಪಂದ್ಯ ಇದೇ 6ರಂದು ನಡೆಯಲಿದೆ. ಉಳಿದ ನಾಲ್ಕು ಪಂದ್ಯಗಳು ಕ್ರಮವಾಗಿ ಏ. 7, 10, 12 ಮತ್ತು 13ರಂದು ನಡೆಯಲಿವೆ.

ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡ ಸೋಮವಾರ ತಡರಾತ್ರಿ ಪ್ರಯಾಣ ಕೈಗೊಂಡಿತು. ತಂಡ ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದಿದ್ದ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಆಡಿದ ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಉತ್ತಮ ಮನೋಬಲದಲ್ಲಿದೆ.

‘ಆಸ್ಟ್ರೇಲಿಯಾದ ನಿರ್ಣಾಯಕ ಪ್ರವಾಸಕ್ಕೆ ಸಜ್ಜಾಗಿದ್ದೇವೆ. ಈ ಸರಣಿಯು ನಮಗೆ ಒಲಿಂಪಿಕ್ಸ್‌ಗಿಂತ ಮೊದಲು ನಮ್ಮ ಸಾಮರ್ಥ್ಯ ಮತ್ತು ಸುಧಾರಿಸಿಕೊಳ್ಳಬೇಕಾದ ಕ್ಷೇತ್ರ ತಿಳಿದುಕೊಳ್ಳಲು ನೆರವಾಗಲಿದೆ’ ಎಂದು ಹರ್ಮನ್‌ಪ್ರೀತ್ ಹೇಳಿದರು.

‘ನಮ್ಮಿಂದ ಆದಷ್ಟು ಒಳ್ಳೆಯ ಆಟ ನೀಡಲು ಬದ್ಧರಾಗಿದ್ದೇವೆ. ಕ್ರೀಡಾಂಗಣದ ಪ್ರತಿ ಕ್ಷಣವೂ ನಮಗೆ ಅಮೂಲ್ಯ’ ಎಂದು ಅವರು ಹೇಳಿದರು.

ತಂಡ ಹೀಗಿದೆ:

ಗೋಲ್‌ಕೀಪರ್ಸ್‌: ಕೃಷನ್ ಬಹಾದ್ದೂರ್ ಪಾಠಕ್, ಪಿ.ಆರ್‌.ಶ್ರೀಜೇಶ್ ಮತ್ತು ಸೂರಜ್ ಕರ್ಕೇರಾ. ಡಿಫೆಂಡರ್ಸ್‌: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಜರ್ಮನ್‌ಪ್ರೀತ್ ಸಿಂಗ್‌, ಅಮಿತ್ ರೋಹಿದಾಸ್‌, ಜುಗರಾಜ್ ಸಿಂಗ್, ಸಂಜಯ್, ಸುಮಿತ್, ಅಮಿರ್ ಅಲಿ.

ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್, ಶಂಷೇರ್ ಸಿಂಗ್, ನೀಲಕಂಠ ಶರ್ಮಾ, ರಾಜಕುಮಾರ್ ಪಾಲ್, ವಿಷ್ಣುಕಾಂತ ಸಿಂಗ್.

ಫಾರ್ವರ್ಡ್ಸ್‌: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಲಲಿತ್‌ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಗುರ್ಜಂತ್ ಸಿಂಗ್, ಮೊಹಮ್ಮದ್‌ ರಹೀಲ್ ಮೌಸೀನ್, ಬಾಬಿ ಸಿಂಗ್ ಧಾಮಿ, ಅರಿಜಿತ್ ಸಿಂಗ್ ಹುಂಡಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT