ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಪಟ್ನಾ–ಪುಣೆ ಪಂದ್ಯ ಟೈ

Published 27 ಜನವರಿ 2024, 22:49 IST
Last Updated 27 ಜನವರಿ 2024, 22:49 IST
ಅಕ್ಷರ ಗಾತ್ರ

ಪಟ್ನಾ: ಪಟ್ನಾ ಪೈರೇಟ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳ ನಡುವೆ ಶನಿವಾರ ರಾತ್ರಿ  ಪ್ರೊ ಕಬಡ್ಡಿ ಟೂರ್ನಿಯಲ್ಲಿ ನಡೆದ ಪಂದ್ಯವು ಟೈ ಆಯಿತು.

ಪುಣೇರಿ ತಂಡದ ನಾಯಕ ಅಸ್ಲಂ ಇನಾಮದಾರ್ (13 ಅಂಕ) ಮತ್ತು ಪಟ್ನಾ ತಂಡದ ನಾಯಕ ಸಚಿನ್ (ಒಂಬತ್ತು ಅಂಕ) ಅವರ ಹೋರಾಟದಿಂದಾಗಿ ಪಂದ್ಯವು 32–32ರಿಂದ ಟೈ ಆಯಿತು.

ಆತಿಥೇಯ ಪಟ್ನಾ ತಂಡದ ಮಯೂರ್ ಕದಂ ಟ್ಯಾಕ್ಲಿಂಗ್‌ನಲ್ಲಿ ಐದು ಅಂಕ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡವು 36–27ರಿಂದ ಯುಪಿ ಯೋಧಾಸ್ ವಿರುದ್ಧ ಜಯಗಳಿಸಿತು. ದಬಂಗ್ ತಂಡದ ನಾಯಕ ಆಶು ಮಲೀಕ್ 11 ಅಂಕಗಳನ್ನು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT