ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಘಿಕ ಪ್ರದರ್ಶನ: ಪಲ್ಟನ್‌ಗೆ ಗೆಲುವು

ಪಾಯಿಂಟ್ಸ್‌ ಪಟ್ಟಿಯಲ್ಲಿ ಪುಣೇರಿಗೆ ಅಗ್ರಸ್ಥಾನ
Published 26 ಡಿಸೆಂಬರ್ 2023, 19:47 IST
Last Updated 26 ಡಿಸೆಂಬರ್ 2023, 19:47 IST
ಅಕ್ಷರ ಗಾತ್ರ

ಚೆನ್ನೈ : ಪಂಕಜ ಮೋಹಿತೆ ಮತ್ತು ಮೋಹಿತ್ ಗೋಯತ್ ಅವರ ಚುರುಕಾದ ದಾಳಿಯ ಬಲದಿಂದ ಪುಣೇರಿ ಪಲ್ಟನ್ ತಂಡವು ಪ್ರೊ. ಕಬಡ್ಡಿ ಲೀಗ್‌ನ ಏಕ ಪಕ್ಷೀಯ ಪಂದ್ಯದಲ್ಲಿ ಮಂಗಳವಾರ ಪಟ್ನಾ ಪೈರೇಟ್ಸ್‌ ತಂಡವನ್ನು 18 ಪಾಯಿಂಟ್‌ (46–28) ಗಳಿಂದ ಸುಲಭವಾಗಿ ಸೋಲಿಸಿತು.  

ಲೀಗ್‌ನಲ್ಲಿ ಆಡಿರುವ ಏಳು ಪಂದ್ಯಗಳ ಪೈಕಿ ಆರು ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಪುಣೇರಿ ಪಲ್ಟನ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ (31 ಅಂಕ) ಅಗ್ರಸ್ಥಾನದಲ್ಲಿದೆ. ಪಟ್ನಾ ತಂಡವು ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಮತ್ತೆ ನಾಲ್ಕರಲ್ಲಿ ಸೋತು ಪಾಯಿಂಟ್‌ ಪಟ್ಟಿಯಲ್ಲಿ ಒಂಬತ್ತನೆ ಸ್ಥಾನದಲ್ಲಿದೆ.

ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ತಂಡದವರು ಉತ್ತಮ ಆಟ ಪ್ರದರ್ಶಿಸಿದರು. ನಾಲ್ಕು ನಿಮಿಷಗಳಲ್ಲಿ ಪಲ್ಟಾನ್ 6-1 ಮುನ್ನಡೆ ಸಾಧಿಸಿತು. ಉತ್ತಮ ರೈಡಿಂಗ್‌ ಮತ್ತು ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಮಧ್ಯಂತರದ ವೇಳೆಗೆ ಪುಣೇರಿ ತಂಡ 22–15ರಿಂದ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲೂ ಉತ್ತಮ ಪ್ರದರ್ಶನ ನೀಡಿತು. ಪಟ್ನಾ ಪೈರೇಟ್ಸ್ ತಂಡವನ್ನು ಮೂರು ಬಾರಿ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. 

ಸತತ ಸೋಲಿನಿಂದ ಚೇತರಿಸಿಕೊಂಡು ಹಿಂದಿನ ಪಂದ್ಯದಲ್ಲಿ ಗೆದ್ದಿದ್ದ ಪೈರೇಟ್ಸ್‌ ಮತ್ತೆ ಮುಗ್ಗರಿಸಿತು. 

ಪಲ್ಟನ್‌ ತಂಡದ ಪರ ಪಂಕಜ ಮೊಹಿತೆ ಅವರು ‘ಸೂಪರ್ ಟೆನ್‌’ ಸಾಧನೆ ಮಾಡಿದರು. ಇವರಿಗೆ ಸಹ ಆಟಗಾರರಾದ ಮೋಹಿತ್ ಗೋಯತ್‌ 9, ಅಸ್ಲಾಂ ಇನಾಮದಾರ 6, ಮೊಹಮ್ಮದ್ರೇಜಾ 6 ಪಾಯಿಂಟ್‌ ಕಲೆ ಹಾಕಿದರು. ಅಭಿನೇಶ್ ನಾಡರಾಜನ್ ಟ್ಯಾಕಲ್‌ನಲ್ಲಿ 5 ಪಾಯಿಂಟ್ ಸಂಗ್ರಹಿಸಿದರು. 

ಪಟ್ನಾ ಪರ ಸಚಿನ್ 8, ಸುಧಾಕರ್ 5, ಮಂಜಿತ್‌ ಹಾಗೂ ಸಂದೀಪ್‌ ಕುಮಾರ್ ತಲಾ 4 ಅಂಕ ಗಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT