ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡೋನೆಷ್ಯಾ ಓಪನ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲಿಯೇ ಹೊರಬಿದ್ದ ಸಿಂಧು

ಇಂಡೋನೆಷ್ಯಾ ಓಪನ್ ಬ್ಯಾಡ್ಮಿಂಟನ್: ಭಾರತ ಡಬಲ್ಸ್ ಜೋಡಿಗೆ ನಿರಾಶೆ
Published 5 ಜೂನ್ 2024, 12:27 IST
Last Updated 5 ಜೂನ್ 2024, 12:27 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಪಿ.ವಿ. ಸಿಂಧು ಬುಧವಾರ ಇಲ್ಲಿ ಆರಂಭವಾದ ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಡನ್ ಸೂಪರ್ 1000 ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದರು. 

ಎರಡು ಒಲಿಂಪಿಕ್ಸ್ ಪದಕ ವಿಜೇತ ಆಟಗಾರ್ತಿ ಸಿಂಧು ಅವರು ಮಹಿಳೆಯರ ಸಿಂಗಲ್ಸ್‌ನ  ಮೊದಲ ಸುತ್ತಿನಲ್ಲಿ 15-21, 21-15, 14-21ರಿಂದ ಚೈನಿಸ್ ತೈಪೆಯ ಸು ವೆನ್ ಚಿ ವಿರುದ್ಧ ಜಯಿಸಿದರು. 

ಸಿಂಧು ಅವರು ಈಚೆಗೆ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು.  ಸಿಂಗಪುರ ಓಪನ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿದ್ದರು. 

ಒಂದು ಗಂಟೆ ಮತ್ತು 10 ನಿಮಿಷ ನಡೆದ ಹಣಾಹಣಿಯಲ್ಲಿ ತೈಪೆಯ ಆಟಗಾರ್ತಿ ಜಯಿಸಿದರು. ಅವರು ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದವರು. 

ಮಹಿಳೆಯರ ಡಬಲ್ಸ್‌ನಲ್ಲಿಯೂ ಭಾರತ ನಿರಾಶೆ ಅನುಭವಿಸಿತು. ಋತುಪರ್ಣಾ ಪಂಡಾ ಮತ್ತು ಶ್ವೇತಪರ್ಣಾ ಪಂಡಾ ಜೋಡಿಯು 12–21, 9–21ರಿಂದ ಕೊರಿಯಾದ ಆರನೇ ಶ್ರೇಯಾಂಕದ ಕಿಮ್ ಸೊ ಯಾಂಗ್ ಮತ್ತು ಕಾಂಗ್ ಹೀ ಯಾಂಗ್ ವಿರುದ್ಧ ಸೋತಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT