ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್‌ | ಪ್ರಣಯ್, ಸಿಂಧು ನಿರ್ಗಮನ: ಭಾರತದ ಸವಾಲು ಅಂತ್ಯ

Published 11 ಏಪ್ರಿಲ್ 2024, 15:40 IST
Last Updated 11 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ನಿಂಗ್ಬೊ (ಚೀನಾ): ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್ ಅವರು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವುದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿತು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚಿವಾಗಿ ಉತ್ತಮ ಪ್ರದರ್ಶನಕ್ಕೆ ಪ್ರಯತ್ನಿಸುತ್ತಿರುವ ಸಿಂಧು, ಒಂದು ಗಂಟೆ ಒಂಬತ್ತು ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ತೀವ್ರ ಪೈಪೋಟಿ ನೀಡಿದರು. ಆದರೆ, ಚೀನಾದ ಆರನೇ ಶ್ರೇಯಾಂಕದ ಹಾನ್ ಯು ವಿರುದ್ಧ 18-21, 21-13, 17-21 ಅಂತರದಲ್ಲಿ ಸೋಲನುಭವಿಸಿದರು.

ಗುರುವಾರದ ಪಂದ್ಯಕ್ಕೆ ಮೊದಲು 5-0 ದಾಖಲೆ ಹೊಂದಿದ್ದ ಯು ವಿರುದ್ಧ ಸಿಂಧು ಅವರ ಮೊದಲ ಸೋಲು ಇದಾಗಿದೆ.

ವಿಶ್ವದ 9ನೇ ರ್‍ಯಾಂಕ್‌ನ ಪ್ರಣಯ್ ಅವರು 43 ನಿಮಿಷಗಳ ಪಂದ್ಯದಲ್ಲಿ ಚೀನಾ ತೈಪೆಯ ಶ್ರೇಯಾಂಕ ರಹಿತ ಲಿನ್ ಚುನ್ ಯಿ ವಿರುದ್ಧ 18–21, 21–13, 17–21 ಅಂತರದಲ್ಲಿ ಸೋತರು. 

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 17–21, 12–21ರಲ್ಲಿ ಮೂರನೇ ಶ್ರೇಯಾಂಕದ ಜಪಾನಿನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ಎದುರು ಸೋತಿತು.

ಮೊದಲ ಗೇಮ್ ನಲ್ಲಿ ಉತ್ತಮ ಆರಂಭ ಪಡೆದ ಸಿಂಧು, ತಮ್ಮ ಅನುಭವವನ್ನು ಬಳಸಿಕೊಂಡು 8-4ರ ಮುನ್ನಡೆ ಸಾಧಿಸಿದರು.  ಬಳಿಕ ಅವರ ಆಟದಲ್ಲಿ ತಪ್ಪುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಎದುರಾಳಿ ಉತ್ತಮ ಪುನರಾಗಮನ ಮಾಡಿ ಮೇಲುಗೈ ಸಾಧಿಸಿದರು.

ಪ್ರಣಯ್
ಪ್ರಣಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT