ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ನಗಾಲ್ ಮುಡಿಗೆ ಟಂಪೆರೆ ಓಪನ್‌

Published 23 ಜುಲೈ 2023, 19:04 IST
Last Updated 23 ಜುಲೈ 2023, 19:04 IST
ಅಕ್ಷರ ಗಾತ್ರ

ಟಂಪೆರೆ (ಫಿನ್ಲೆಂಡ್‌): ಭಾರತದ ಸುಮಿತ್‌ ನಗಾಲ್ ಅವರು ಟಂಪೆರೆ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಜೆಕ್‌ ರಿಪಬ್ಲಿಕ್‌ನ ದಲಿಬೋರ್ ಸ್ವಿರ್ಸಿನ ಅವರನ್ನು ಮಣಿಸಿ ಚಾಂಪಿಯನ್ ಆದರಲ್ಲದೆ, ವೃತ್ತಿಜೀವನದ ನಾಲ್ಕನೇ ಚಾಲೆಂಜರ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.

ಏಳನೇ ಶ್ರೇಯಾಂಕದ ಸುಮಿತ್‌ ಅವರು ಐದನೇ ಶ್ರೇಯಾಂಕದ ದಲಿಬೋರ್ ವಿರುದ್ಧ 6–4, 7–5 ರಿಂದ ಗೆದ್ದರು. 25 ವರ್ಷದ ಅವರು ಎಟಿಪಿ ಚಾಲೆಂಜರ್‌ ಮಟ್ಟದ ಐದು ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿ, ನಾಲ್ಕನ್ನು ಗೆದ್ದಂತಾಗಿದೆ. ಅವರು ಕಳೆದ ಏಪ್ರಿಲ್‌ನಲ್ಲಿ ರೋಮ್‌ನಲ್ಲಿ ನಡೆದ ಗಾರ್ಡನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ಫೈನಲ್‌ ಪಂದ್ಯದ ಮೊದಲ ಸೆಟ್‌ನ ಆರಂಭದಲ್ಲಿ 0–3 ರಿಂದ ಹಿನ್ನಡೆ ಅನುಭವಿಸಿದ್ದ ಸುಮಿತ್‌, ನಂತರ ಪುಟಿದೆದ್ದು ಬೇಸ್‌ಲೈನ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಮೇಲುಗೈ ಸಾಧಿಸಿದರು.

ಎರಡನೇ ಸೆಟ್‌ನಲ್ಲೂ ಜೆಕ್‌ನ ಆಟಗಾರ ಪ್ರಬಲ ಸವಾಲು ಒಡ್ಡಿದರು.‌ ಒಂದು ಹಂತದಲ್ಲಿ 5–5ರಿಂದ ಸಮಬಲ ಸಾಧಿಸಿದರೂ, ಭಾರತೀಯ ಆಟಗಾರ ಸತತ ಎರಡು ಗೇಮ್‌ ಗೆದ್ದುಕೊಂಡರು. ಪ್ರಶಸ್ತಿ ಸುತ್ತಿನ ಸ್ಪರ್ಧೆ 1 ಗಂಟೆ 44 ನಿಮಿಷ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT