ಬ್ಯಾಂಕಾಕ್: ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಪ್ರಿಕ್ವಾರ್ಟರ್ ಫೈನಲ್ ತಲುಪಿದರು. ಆದರೆ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಎಚ್.ಎಸ್.ಪ್ರಣಯ್ ಬುಧವಾರ ಮೊದಲ ಸುತ್ತಿನಲ್ಲೇ ಸ್ವದೇಶದ ಆಟಗಾರ ಮೀರಬಾ ಲುವಾಂಗ್ ಮೈಸ್ನಮ್ ಎದುರು ಅಚ್ಚರಿಯ ಸೋಲನುಭವಿಸಿದರು.

ಸಾತ್ವಿಕ್– ಚಿರಾಗ್ ಜೋಡಿ ಮೊದಲ ಸುತ್ತಿನಲ್ಲಿ ಮಲೇಷ್ಯಾದ ನೂರ್ ಮೊಹಮ್ಮದ್ ಅಝ್ರಿನ್ ಅಯೂಬ್ –ತಾನ್ ವೀ ಕಿಯಾಂಗ್ ಜೋಡಿಯನ್ನು 21–13, 21–13 ರಲ್ಲಿ ಸೋಲಿ ಸಲು ಬರೇ 34 ನಿಮಿಷ ತೆಗೆದುಕೊಂಡಿತು. ವಿಜೇತ ಆಟಗಾರರು ಎರಡನೇ ಸುತ್ತಿನಲ್ಲಿ ಚೀನಾದ ಷೀ ಹಾವೊ ನಾನ್– ಝೆಂಗ್ ವೀ ಹಾನ್ ಜೋಡಿಯನ್ನು ಎದುರಿಸಲಿದ್ದಾರೆ.

ಆದರೆ ಸಿಂಗಲ್ಸ್‌ನಲ್ಲಿ ಪ್ರಣಯ್ ಮೊದಲ ತಡೆಯನ್ನು ದಾಟಲು ವಿಫಲರಾದರು. ಅವರು 19–21, 18–21ರಲ್ಲಿ ಮೀರಬಾ ಅವರಿಗೆ ಮಣಿಯಬೇಕಾಯಿತು. ಮೀರಬಾ ಅವರ ಮುಂದಿನ ಎದುರಾಳಿ ಡೆನ್ಮಾರ್ಕ್‌ನ ಮಾಡ್ಸ್ ಕ್ರಿಸ್ಟೋಫರ್‌ಸೆನ್. ಡೆನ್ಮಾರ್ಕ್ ಆಟಗಾರ ಮೊದಲ ಸುತ್ತಿನಲ್ಲಿ ಭಾರತದ ಕಿರಣ್ ಜಾರ್ಜ್ ಅವರನ್ನು ಮೂರು ಗೇಮ್‌ಗಳ ಹಣಾಹಣಿಯಲ್ಲಿ 21–15, 13–21, 21–17 ರಿಂದ ಸೋಲಿಸಿದರು.

ಅಶ್ಮಿತಾ ಮುನ್ನಡೆ: ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಶ್ಮಿತಾ ಚಾಲಿಹಾ 19–21, 21–15, 21–14 ರಿಂದ ಇಂಡೊನೇಷ್ಯಾದ ಇಸ್ಟರ್ ನುರುಮಿ ಟ್ರಿ ವಾರ್ಡೊಯೊ ಅವರನ್ನು ಹಿಮ್ಮೆಟ್ಟಿಸಿದರು.

ಎರಡನೇ ಸುತ್ತಿನಲ್ಲಿ ಅಶ್ಮಿತಾ ಅವರಿಗೆ ಪ್ರಬಲ ಎದುರಾಳಿ– ಅಗ್ರ ಶ್ರೇಯಾಂಕದ ಹಾನ್ ಯುಇ ಎದುರಾಗಲಿದ್ದಾರೆ. ಹಾನ್ ಮೊದಲ ಸುತ್ತಿನಲ್ಲಿ ಭಾರತದ ಮಾಳವಿಕಾ ಬನ್ಸೋಡ್ ಅವರನ್ನು ಹೆಚ್ಚು ಕಷ್ಟವಿಲ್ಲದೇ 21–11, 21–10 ರಿಂದ ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.