ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ರಾಕೆಟ್ಲಾನ್ ಚಾಂಪಿಯನ್‌ಷಿಪ್: ಭಾರತ ತಂಡಕ್ಕೆ ವಿಕ್ರಮಾದಿತ್ಯ ನಾಯಕ

Published 28 ಮೇ 2024, 16:01 IST
Last Updated 28 ಮೇ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ಜುಲೈ 31 ರಿಂದ ಆಗಸ್ಟ್ 4 ರವರೆಗೆ ರೋಟರ್ಡ್ಯಾಮ್‌ನಲ್ಲಿ ನಡೆಯಲಿರುವ ವಿಶ್ವ ರಾಕೆಟ್ಲಾನ್ ಚಾಂಪಿಯನ್‌ಷಿಪ್‌ಗಾಗಿ ಆರು ಆಟಗಾರರು ಇರುವ ಭಾರತ ತಂಡದ ನಾಯಕನಾಗಿ ವಿಕ್ರಮಾದಿತ್ಯ ಚೌಫ್ಲಾ ಅವರನ್ನು ರಾಕೆಟ್ಲಾನ್ ಇಂಡಿಯಾ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳವಾರ ನೇಮಕ ಮಾಡಿದೆ.

ತಂಡದಲ್ಲಿ ನಿಹಿತ್ ಕುಮಾರ್ ಸಿಂಗ್, ಕರಣ್ ತನೇಜಾ, ಪ್ರಶಾಂತ್ ಸೇನ್, ನಿಖಿಲ್ ಮನ್ಸುಖಾನಿ ಮತ್ತು ಏಕೈಕ ಮಹಿಳಾ ಆಟಗಾರ್ತಿ ನಯನಾ ತನೇಜಾ ಅವರು ಇದ್ದಾರೆ. ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌, ಟೆನಿಸ್‌ ಹಾಗೂ ಸ್ಕ್ವಾಷ್‌ ಒಳಗೊಂಡಿರುವ ಕ್ರೀಡೆಯೇ ರ‍್ಯಾಕೆಟ್ಲಾನ್. ಇದರಲ್ಲಿ ಸ್ಪರ್ಧಿಗಳು ನಾಲ್ಕು  ಕ್ರೀಡೆಗಳನ್ನು ಆಡಬೇಕಾಗುತ್ತದೆ.  

ಮಾಜಿ ಬ್ಯಾಡ್ಮಿಂಟನ್ ಆಟಗಾರ ಚೌಫ್ಲಾ ಹಿಂದಿನ ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತ ರಾಕೆಟ್ಲಾನ್ ತಂಡದ ಭಾಗವಾಗಿದ್ದರು. ರೋಟರ್ಡ್ಯಾಮ್‌ನಲ್ಲಿ ನಡೆದ 2022ರ ಆವೃತ್ತಿಯ ವೈಯಕ್ತಿಕ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು.

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತಂಡವನ್ನು ಮುನ್ನಡೆಸುವುದು ನನಗೆ ದೊಡ್ಡ ಗೌರವವಾಗಿದೆ. ರಾಕೆಟ್ಲಾನ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವುದು ನಮ್ಮ ಗುರಿ' ಎಂದು ಉದಯಪುರ ಮೂಲದ ಚೌಫ್ಲಾ ಹೇಳಿದ್ದಾರೆ.

ರಾಕೆಟ್ಲಾನ್ ಇಂಡಿಯಾ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೆ.ಚೀಮಾ ಅವರು ತಂಡದ ವ್ಯವಸ್ಥಾಪಕರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT