ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ವಿತಿದ್‌ಸಾರ್ನ್‌, ಫೆಂಗ್‌ ನಿರ್ಗಮನ

Published 18 ಜನವರಿ 2024, 12:11 IST
Last Updated 18 ಜನವರಿ 2024, 12:11 IST
ಅಕ್ಷರ ಗಾತ್ರ

ನವದೆಹಲಿ: ಅಚ್ಚರಿಯ ಫಲಿತಾಂಶದಲ್ಲಿ ವಿಶ್ವ ಚಾಂಪಿಯನ್ ಕುನ್ಲಾವುತ್ ವಿತಿದ್‌ಸಾರ್ನ್‌ ಅವರು ಇಂಡಿಯಾ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದರು. ಇಂದಿರಾ ಗಾಂಧಿ ಕ್ರೀಡಾಂಗಣದ ಕೆ.ಡಿ.ಜಾಧವ್ ಒಳಾಂಗಣ ಹಾಲ್‌ನಲ್ಲಿ ಹಾಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಲಿ ಶಿ ಫೆಂಗ್‌ ಅವರೂ ಗುರುವಾರ ಅನಿರೀಕ್ಷಿತ ಸೋಲು ಕಂಡರು.

ವಿಶ್ವ ಕಪ್‌ ಗೆದ್ದ ನಂತರ ನಿರೀಕ್ಷೆಯ ಭಾರ ಎದುರಿಸುತ್ತಿರುವ 22 ವರ್ಷದ ಕುನ್ಲಾವುತ್ ಅವರನ್ನು ಹಾಂಗ್‌ಕಾಂಗ್‌ನ ಲೀ ಚಿಯುಕ್ ಯಿಯು ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 21–16, 20–22, 21–13 ರಿಂದ ಪರಾಭವಗೊಳಿಸಿದರು. ಒಂದು ಗಂಟೆ 22 ನಿಮಿಷಗಳಲ್ಲಿ ಈ ಪಂದ್ಯ ಇತ್ಯರ್ಥಗೊಂಡಿತು.

‘ಇಂದು ನನ್ನಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಕೊನೆಯ ಗೇಮ್‌ನಲ್ಲಿ ಒತ್ತಡಕ್ಕೆ ಒಳಗಾದೆ. ಪಂದ್ಯ ನನ್ನ ಹಿಡಿತಕ್ಕೆ ಸಿಗಲಿಲ್ಲ. ಎದುರಾಳಿ ಚೆನ್ನಾಗಿ ಆಡಿದರು’ ಎಂದು ಕುನ್ಲಾವುತ್ ಪ್ರತಿಕ್ರಿಯಿಸಿದರು.

ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಲಿ ಶಿ ಫೆಂಗ್ ಅವರೂ ಸೋಲನುಭವಿಸಿದರು. ಶ್ರೇಯಾಂಕರಹಿತ ಆಟಗಾರ, ಜಪಾನ್‌ನ ಕೊಕೊ ವತಾನಬೆ ಅವರು 71 ನಿಮಿಷಗಳ ಸೆಣಸಾಟದಲ್ಲಿ 21-14, 13-21, 21-9 ರಿಂದ ಫೆಂಗ್ ಅವರನ್ನು ಹಿಮ್ಮೆಟ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT