ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಸ್ತಿ: ವಿನೇಶಾ, ಸಾಕ್ಷಿಗೆ ಪ್ರಶಸ್ತಿ

Last Updated 1 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಗೊಂಡಾ, ಉತ್ತರಪ್ರದೇಶ: ವಿನೇಶಾ ಪೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಇಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಶನಿವಾರ ನಡೆದ ಮಹಿಳೆಯರ 57 ಕೆ.ಜಿ.ವಿಭಾಗದಲ್ಲಿ ಹರಿಯಾಣದ ವಿನೇಶಾ ಪೋಗಟ್ ಅವರು ಮೊದಲ ಸುತ್ತಿನಲ್ಲಿ ಚಂಡಿಗಡದ ನೀತು ಅವರ ಎದುರು 13–2ರಿಂದ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಕರ್ನಾಟಕದ ಶ್ವೇತಾ ಬೆಳಗಟ್ಟಿ ಅವರು ವಿನೇಶಾಗೆ ಸುಲಭದ ತುತ್ತಾದರು.ಈ ಸೆಣಸಾಟದಲ್ಲಿ ವಿನೇಶಾ 8–0ಯಿಂದ ಜಯಿಸಿದರು. ಎಂಟರ ಘಟ್ಟದಲ್ಲಿ ವಿನೇಶಾ ಅವರು ಮನೀಷಾ ಅವರ ದಿಟ್ಟ ಪೈಪೋಟಿಯನ್ನು ಎದುರಿಸಿ 6–0ಯಿಂದ ಗೆದ್ದರು. ಸೆಮಿಫೈನಲ್‌ನಲ್ಲಿ ಅವರು ಕೇವಲ 76 ಸೆಕೆಂಡುಗಳಲ್ಲಿ ಹರಿಯಾಣ ಬಿ ತಂಡದ ರವಿತಾ ವಿರುದ್ಧ ಗೆದ್ದರು. ಇದರಲ್ಲಿ ಅವರು ಫೋರ್ ಪಾಯಿಂಟ್ ಥ್ರೋ ಮೂಲಕ ಗಮನ ಸೆಳೆದರು.

ಫೈನಲ್‌ನಲ್ಲಿ ಅವರು ತಮ್ಮದೇ ರಾಜ್ಯದ ಬಬಿತಾ ಅವರ ಎದುರು ಸೆಣಸಾಡಿದರು. 10 ಪಾಯಿಂಟ್ಸ್‌ ಗಳಿಂದ ಗೆದ್ದ ವಿನೇಶಾ ಪ್ರಶಸ್ತಿ ಪಡೆದರು.

‘15 ದಿನಗಳ ಹಿಂದಷ್ಟೇ ಅಭ್ಯಾಸ ಆರಂಭಿಸಿದ್ದೆ. ಈ ವಿಜಯದಿಂದ ನನಗೆ ಆತ್ಮವಿಶ್ವಾಸ ಮರುಕಳಿಸಿದೆ. ಮುಂಬರುವ ಮಹತ್ವದ ಸ್ಪರ್ಧೆಗಳಲ್ಲಿ ಗೆಲ್ಲುವು ಛಲ ಇದೆ’ ಎಂದು ವಿನೇಶಾ ಹೇಳಿದರು.

ಸಾಕ್ಷಿ ಮಿಂಚು: 2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ಇಲ್ಲಿ 62 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದರು. ಐದು ಬೌಟ್‌ಗಳಲ್ಲಿ ಅವರು ಒಂದೂ ಪಾಯಿಂಟ್‌ ಕಳೆದುಕೊಳ್ಳದೇ ಪ್ರಶಸ್ತಿಗೆ ಮುತ್ತಿಕ್ಕಿದರು.

ಮೊದಲ ಬೌಟ್‌ನಲ್ಲಿ ಅವರಿಗೆ ರೈಲ್ವೆಯ ಅಪೂರ್ವಾ ಅವರಿಂದ ವಾಕ್‌ ಓವರ್ ದೊರೆಯಿತು. ಎರಡನೇ ಬೌಟ್‌ನಲ್ಲಿ ಉತ್ತರ ಪ್ರದೇಶದ ಪೂಜಾ ತೋಮರ್ ವಿರುದ್ಧ ಟೆಕ್ನಿಕಲ್ ಸುಪಿರಿಯಾರಿಟಿ ಆಧಾರದಲ್ಲಿ ಜಯಿಸಿದರು. ನಂತರದ ಬೌಟ್‌ನಲ್ಲಿ ಮಣಿಪುರದ ಲುವಾಂಗ್ ಕೊಂಬಿ ವಿರುದ್ಧ 43 ಸೆಕೆಂಡುಗಳಲ್ಲಿ ಮೇಲುಗೈ ಸಾಧಿಸಿದರು.

ಫೈನಲ್‌ನಲ್ಲಿ ಅವರು ಹರಿಯಾಣದ ಪೂನಾ ವಿರುದ್ಧ 11 –0 ಪಾಯಿಂಟ್‌ಗಳಿಂದ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT