ಮುಂಬೈ ಚೇ ರಾಜೆ ಜಯಭೇರಿ

ಗುರುವಾರ , ಜೂನ್ 20, 2019
24 °C
ಐಐಪಿ ಕಬಡ್ಡಿ ಲೀಗ್‌: ಮಹೇಶ್‌ ಮಿಂಚಿನ ಆಟ

ಮುಂಬೈ ಚೇ ರಾಜೆ ಜಯಭೇರಿ

Published:
Updated:

ಬೆಂಗಳೂರು: ರೋಚಕ ಹಣಾಹಣಿಗೆ ಸಾಕ್ಷಿಯಾದ ಐಐಪಿಕೆಎಲ್‌ ಅಂತಿಮ ಲೆಗ್‌ನ ಮೊದಲ ಲೀಗ್‌ ಪಂದ್ಯದಲ್ಲಿ ಮುಂಬೈ ಚೇ ರಾಜೇ ತಂಡ ಹರಿಯಾಣ ಹೀರೋಸ್‌ ತಂಡವನ್ನು 69–53 ಪಾಯಿಂಟ್‌ಗಳಿಂದ ಮಣಿಸಿತು. ರೇಡಿಂಗ್‌ನಲ್ಲಿ ಮಿಂಚಿದ ಮಹೇಶ್‌ ಎಂ. ಮುಂಬೈ ತಂಡಕ್ಕೆ ಭರ್ಜರಿ ಗೆಲುವಿನ ಉಡುಗೊರೆ ನೀಡಿದರು.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲೇ ಉಭಯ ತಂಡಗಳು ಬಿರುಸಿನ ಆಟಕ್ಕಿಳಿದವು. ಹರಿಯಾಣ ತಂಡದ ಸತ್ನಾಮ್‌ ಸಿಂಗ್‌ ಪ್ರಥಮ ಕ್ವಾರ್ಟರ್‌ನಲ್ಲಿ ಸೊಗಸಾದ ರೇಡಿಂಗ್‌ ಮೂಲಕ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ಪ್ರಥಮ ಕ್ವಾರ್ಟರ್‌ ಮುಕ್ತಾಯದ ವೇಳೆಗೆ ‌ಹರಿಯಾಣ ತಂಡ 17–16ರ ಮುನ್ನಡೆ ಸಾಧಿಸಿತು. 

ಬಳಿಕ ಉಭಯ ತಂಡಗಳ ಆಟಗಾರರು ಬಿರುಸಿನ ಆಟಕ್ಕೆ ಒತ್ತು ನೀಡಿದರು. ಎರಡನೇ ಕ್ವಾರ್ಟರ್‌ನಲ್ಲಿ ಮುಂಬೈ ತಂಡದ ಮಹೇಶ್‌. ಎಂ. ರೇಡಿಂಗ್‌ನಲ್ಲಿ ಆಕ್ರಮಣಕಾರಿಯಾಗಿ ಕಂಡುಬಂದರು. ಒಟ್ಟು 18 ಪಾಯಿಂಟ್‌ ಗಳಿಸಿದ ಅವರು, ಮುಗ್ಗರಿಸುವ ಹಂತದಲ್ಲಿದ್ದ ತಂಡವನ್ನು ಮೇಲೆತ್ತಿದರು. ಮೂರನೇ ಕ್ವಾರ್ಟರ್‌ ನಂತರ ಮುಂಬೈ ತಂಡ ಮುನ್ನಡೆಯನ್ನು ಹೆಚ್ಚಿಸುತ್ತಲೇ ಸಾಗಿತು. ಅಂತಿಮವಾಗಿ ಭರ್ಜರಿ ಜಯ ಸಾಧಿಸಿತು.

ಮಹೇಶ್‌ ಅವರಿಗೆ ಪಂದ್ಯದ ಉತ್ತಮ ರೇಡರ್‌ ಹಾಗೂ ಉತ್ತಮ ಆಟಗಾರ ಪ್ರಶಸ್ತಿ ಲಭಿಸಿತು.

ಹರಿಯಾಣ ಪರ ಸತ್ನಾಮ್‌ ಸಿಂಗ್‌ ಒಟ್ಟು 13 ಪಾಯಿಂಟ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಸಂಘಟಿತವಾಗಿ ಆಡುವಲ್ಲಿ ಹೀರೋಸ್‌ ವಿಫಲವಾಯಿತು.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !