ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಅಥ್ಲೆಟಿಕ್ಸ್‌ ಕೂಟಕ್ಕೆ ತೆರೆ: ಶಶಿಕಾಂತ್, ರೀನಾ ‘ವೇಗಿಗಳು’

Last Updated 16 ಅಕ್ಟೋಬರ್ 2018, 18:49 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಶಶಿಕಾಂತ್‌ ಮತ್ತು ರೀನಾ ಜಾರ್ಜ್‌ ಅವರು ದಸರಾ ಅಥ್ಲೆಟಿಕ್‌ ಕೂಟದ ‘ವೇಗಿಗಳು’ ಎನಿಸಿಕೊಂಡರು.

ಮಂಗಳವಾರ ನಡೆದ ಪುರುಷರ ವಿಭಾಗದ 100 ಮೀ. ಓಟದಲ್ಲಿ ಬೆಂಗಳೂರಿನ ಶಶಿಕಾಂತ್ 10.5 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಕೂಟದ ’ವೇಗದ ಓಟಗಾರ’ ಗೌರವ ಪಡೆಯಲು ಆರು ಸ್ಪರ್ಧಿಗಳು ಕಣದಲ್ಲಿದ್ದರು.

ಮೊದಲ 50 ಮೀ. ವರೆಗೆ ಎಲ್ಲರ ನಡುವೆ ಸಮಬಲದ ಪೈಪೋಟಿ ಕಂಡುಬಂತು. ಆ ಬಳಿಕ ವೇಗ ಹೆಚ್ಚಿಸಿಕೊಂಡ ಶಶಿಕಾಂತ್‌ ಮೊದಲಿಗರಾಗಿ ಗುರಿ ತಲುಪಿದರು. ಬೆಂಗಳೂರಿನ ಕುಶಾಲ್‌ ಅಂಬೋರೆ (10.7 ಸೆ.) ಮತ್ತು ಮೈಸೂರಿನ ಸುಹಾಸ್‌ ಜಿ.ಗೌಡ (10.7 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

ಮಹಿಳೆಯರ 100 ಮೀ. ಓಟದಲ್ಲಿ ಐವರ ನಡುವೆ ಪೈಪೋಟಿ ನಡೆಯಿತು. ಮೊದಲ 20 ಮೀ. ಆಗುವಷ್ಟರಲ್ಲೇ ಸ್ಪಷ್ಟ ಮುನ್ನಡೆ ಪಡೆದುಕೊಂಡು ರೀನಾ 11.50 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಶಶಿಕಾಂತ್‌ ಮತ್ತು ರೀನಾ ಅವರು 200 ಮೀ. ಓಟದಲ್ಲೂ ಅಗ್ರಸ್ಥಾನ ಪಡೆದುಕೊಂಡಿದ್ದರು. ‘ಸ್ವರ್ಣ ಡಬಲ್‌’ ಸಾಧನೆಯೊಂದಿಗೆ ‘ಶ್ರೇಷ್ಠ ಅಥ್ಲೀಟ್‌’ ಗೌರವವನ್ನೂ ಪಡೆದುಕೊಂಡು ದಸರಾ ಕೂಟವನ್ನು ಸ್ಮರಣೀಯವನ್ನಾಗಿಸಿಕೊಂಡರು.

ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್

ಒಟ್ಟು 135 ಪಾಯಿಂಟ್‌ಗಳನ್ನು ಕಲೆಹಾಕಿದ ದಕ್ಷಿಣ ಕನ್ನಡ ತಂಡ ಅಥ್ಲೆಟಿಕ್ಸ್‌ ಕೂಟದಲ್ಲಿ ಸಮಗ್ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿತು. ಬೆಂಗಳೂರು ಗ್ರಾಮಾಂತರ ತಂಡ (109 ಪಾಯಿಂಟ್‌) ‘ರನ್ನರ್ ಅಪ್‌’ ಎನಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ (66 ಪಾಯಿಂಟ್) ಮತ್ತು ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು (75 ಪಾಯಿಂಟ್) ‘ತಂಡ ಪ್ರಶಸ್ತಿ’ ಗೆದ್ದುಕೊಂಡವು.

ಫಲಿತಾಂಶ

ಪುರುಷರ ವಿಭಾಗ: 100 ಮೀ ಓಟ: ಶಶಿಕಾಂತ್ (ಬೆಂಗಳೂರು)–1, ಕುಶಾಲ್‌ ಅಂಬೋರೆ (ಬೆಂಗಳೂರು)–2, ಸುಹಾಸ್‌ ಎಸ್‌.ಗೌಡ (ಮೈಸೂರು)–3 ಕಾಲ: 10.50 ಸೆ.

1500 ಮೀ. ಓಟ: ವಿಶ್ವಾಂಭರ್ ಕೆ. (ಬೆಂಗಳೂರು ನಗರ)–1, ಬಿ.ಎಲ್‌.ಕುಮಾರಸ್ವಾಮಿ (ಬೆಂಗಳೂರು ನಗರ)–2, ಬಿ.ಎಲ್‌.ಶಶಿಧರ್ (ದಕ್ಷಿಣ ಕನ್ನಡ)–3 ಕಾಲ: 4 ನಿ. 06.2 ಸೆ.

400 ಮೀ. ಹರ್ಡಲ್ಸ್: ಪ್ರದ್ಯುಮ್ನ ಬೋಪಯ್ಯ–1, ಅಜಿತ್–2, ಆರ್‌.ಜಿ.ಕೃಷ್ಣ–3 (ಎಲ್ಲರೂ ದಕ್ಷಿಣ ಕನ್ನಡ) ಕಾಲ: 56.2 ಸೆ.

ಟ್ರಿಪಲ್‌ ಜಂಪ್: ಸಂದೀಪ್‌ ಶೆಟ್ಟಿ (ದಕ್ಷಿಣ ಕನ್ನಡ)–1, ಬಿ.ನವೀನ್‌ (ಬೆಂಗಳೂರು ನಗರ)–2, ರವಿಮಠ (ದಕ್ಷಿಣ ಕನ್ನಡ)–3 ದೂರ: 15.14 ಮೀ.

ಹ್ಯಾಮರ್ ಥ್ರೋ: ಸುಧೀರ್‌ ಎಸ್–1, ಪಿ.ವಿ.ಯಮನೂರಪ್ಪ–2, ಟಿ.ರಾಹುಲ್‌ ರಾಮ–3 (ಎಲ್ಲರೂ ದಕ್ಷಿಣ ಕನ್ನಡ) ದೂರ: 56.17 ಮೀ.

ಮಹಿಳೆಯರ ವಿಭಾಗ: 100 ಮೀ. ಓಟ: ರೀನಾ ಜಾರ್ಜ್‌ (ಮೈಸೂರು)–1, ದಾನೇಶ್ವರಿ (ಬೆಂಗಳೂರು ಗ್ರಾಮಾಂತರ)–2, ಎಂ.ಜಿ. ಪದ್ಮಿನಿ (ಬೆಂಗಳೂರು ನಗರ)–3 ಕಾಲ: 11.50 ಸೆ.

400 ಮೀ ಹರ್ಡಲ್ಸ್: ಎಂ.ಬಿ.ಬಿಬಿಶಾ (ಬೆಂಗಳೂರು ನಗರ)–1, ಕೆ.ಪ್ರಜ್ಞಾ (ಉಡುಪಿ)–2, ಆರ್.ಸಿಂಧು (ದಕ್ಷಿಣ ಕನ್ನಡ)–3 ಕಾಲ: 1 ನಿ. 03.7 ಸೆ.

1500 ಮೀ. ಓಟ: ಆರ್‌.ಉಷಾ (ಬೆಂಗಳೂರು ಗ್ರಾಮಾಂತರ)–1, ಎಚ್‌.ಎಂ.ಸಹನಾ (ಹಾಸನ)–2, ಬಿ.ದೀಕ್ಷಾ (ದಕ್ಷಿಣ ಕನ್ನಡ)–3 ಕಾಲ: 5 ನಿ. 20.7 ಸೆ.

ಟ್ರಿಪಲ್ ಜಂಪ್: ವಿ.ಎಸ್‌.ಅನಿತಾ (ದಕ್ಷಿಣ ಕನ್ನಡ)–1, ಕೆ.ಆರ್‌.ಸೌಮ್ಯಾ (ಮೈಸೂರು)–2, ವಿ.ಎಸ್‌.ಶ್ರೀದೇವಿಕಾ (ದಕ್ಷಿಣ ಕನ್ನಡ)–3 ದೂರ: 11.82 ಮೀ.

ಹ್ಯಾಮರ್‌ ಥ್ರೋ: ಡಬ್ಲ್ಯು.ಆರ್.ಹರ್ಷಿತಾ (ಮೈಸೂರು)–1, ಅಮ್ರೀನ್ (ದಕ್ಷಿಣ ಕನ್ನಡ)–2, ವೀಕ್ಷಾ (ದಕ್ಷಿಣ ಕನ್ನಡ)–3 ದೂರ: 47.98 ಮೀ.

ಹೆಪ್ಟಥ್ಲಾನ್: ಎಂ.ಆರ್‌.ಧನುಷಾ (ಮೈಸೂರು)–1, ಸಿಂಚಲ್ ಕಾವೇರಮ್ಮ (ದಕ್ಷಿಣ ಕನ್ನಡ)–2, ಎಸ್‌.ಜಿ.ಕವನಾ (ಬೆಂಗಳೂರು)–3 ಪಾಯಿಂಟ್: 4,257

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT