ಟಿ.ಟಿ:ಅನರ್ಘ್ಯಾಗೆ ಬೆಳ್ಳಿ

7

ಟಿ.ಟಿ:ಅನರ್ಘ್ಯಾಗೆ ಬೆಳ್ಳಿ

Published:
Updated:
Deccan Herald

ಬೆಂಗಳೂರು: ಕರ್ನಾಟಕದ ಅನರ್ಘ್ಯಾ ಮಂಜುನಾಥ್‌, ಪುಣೆಯಲ್ಲಿ ನಡೆದ ಪಶ್ಚಿಮ ವಲಯ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಯಶಸ್ವಿನಿ ಘೋರ್ಪಡೆ ಮತ್ತು ನಿಹಾರಿಕಾ ಅನಂತ ಕುಮಾರ್‌ ಅವರು ಕಂಚಿನ ಸಾಧನೆ ಮಾಡಿದ್ದಾರೆ.

ಗುರುವಾರ ನಡೆದ ಸಬ್‌ ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಅನರ್ಘ್ಯ 11–13, 7–11, 4–11, 4–11ರಲ್ಲಿ ಹರಿಯಾಣದ ಸುಹಾನ ಸೈನಿ ಎದುರು ಮಣಿದರು.

ಸಬ್‌ ಜೂನಿಯರ್‌ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಯಶಸ್ವಿನಿ 11–7, 9–11, 9–11, 12–10, 11–5, 5–11, 6–11ರಲ್ಲಿ ಸುಹಾನ ವಿರುದ್ಧ ಸೋತರು.

ಕೆಡೆಟ್‌ ಬಾಲಕಿಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ನಿಹಾರಿಕಾ 11–8, 4–11, 7–11, 7–11ರಲ್ಲಿ ನಂದಿನಿ ಶಾ ಎದುರು ಪರಾಭವಗೊಂಡರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !