ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಉನ್ನತಿ

Last Updated 1 ಡಿಸೆಂಬರ್ 2022, 15:46 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಉನ್ನತಿ ಹೂಡಾ ಅವರು ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಇಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಉನ್ನತಿ ಗುರುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 21–11, 21–19 ರಲ್ಲಿ ಥಾಯ್ಲೆಂಡ್‌ನ ನುಚವಿ ಸಿತ್ತಿತೀರನನ್‌ ವಿರುದ್ಧ ಗೆದ್ದರು.

ಇದೇ ವಿಭಾಗದ ಇನ್ನೊಂದು ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಅನ್ಮೋಲ್‌ 17–21, 21–19, 13–21 ರಲ್ಲಿ ಮಲೇಷ್ಯಾದ ಡನಿಯಾ ಸೊಫಿಯಾ ಎದುರು ಪರಾಭವಗೊಂಡರು.

ಬಾಲಕಿಯರ 15 ವರ್ಷದೊಳಗಿನ ಡಬಲ್ಸ್‌ನಲ್ಲಿ ತನ್ವಿ ರೆಡ್ಡಿ– ದುರ್ಗಾ ಇಶಾ 21–18, 22–20 ರಲ್ಲಿ ಸ್ಥಳೀಯ ಸ್ಪರ್ಧಿಗಳಾದ ಸುನಿಸಾ ಲೆಜುಲ– ಪಿಂಚಾನೊಕ್ ಸುತಿವಿರಿಯಕುಲ್‌ ಅವರನ್ನು ಸೋಲಿಸಿದರು. ನವ್ಯಾ ಖಂಡೇರಿ– ರಕ್ಷಿತಾ ಶ್ರೀ 12–21, 11–21 ರಲ್ಲಿ ಜಪಾನ್‌ನ ಅಕರಿ ಕಮಿಯೊ– ನಯು ಶಿರಕವ ಎದುರು ಸೋತರು.

ಬಾಲಕರ 17 ವರ್ಷದೊಳಗಿನವರ ವಿಭಾಗದ ಡಬಲ್ಸ್‌ನಲ್ಲಿ ಅರ್ಶ್‌ ಮೊಹಮ್ಮದ್‌– ಶಂಕರ್‌ ಸಾರಸ್ವತ್‌ ಜೋಡಿ 21–12, 21–10 ರಲ್ಲಿ ಇಂಡೊನೇಷ್ಯಾದ ದಾನಿಸ್ವರ ಮಹರಿಜಲ್‌–ಯೆರೆಮಿಯಾ ದ್ವಿ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT