ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಎಂಟರ ಘಟ್ಟಕ್ಕೆ ಇಗಾ ಶ್ವಾಂಟೆಕ್ ಲಗ್ಗೆ

ಜೊಕೊವಿಚ್‌ಗೆ ಜಯ,ರೋಹನ್ ಬೋಪಣ್ಣ ಜೋಡಿ ಮುನ್ನಡೆ
Published 2 ಜೂನ್ 2024, 23:51 IST
Last Updated 2 ಜೂನ್ 2024, 23:51 IST
ಅಕ್ಷರ ಗಾತ್ರ

ಪ್ಯಾರಿಸ್: ಹಾಲಿ ಚಾಂಪಿಯನ್, ಪೊಲೆಂಡ್‌ನ ಇಗಾ ಶ್ವಾಂಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. 

ಭಾನುವಾರ ನಡೆದ ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಗಾ 6–0, 6–0ಯಿಂದ ನೇರ ಸೆಟ್‌ಗಳಲ್ಲಿ ರಷ್ಯಾದ ಅನಾಸ್ತೇಸಿಯಾ ಪೊಟಪೊವಾ ವಿರುದ್ಧ ಜಯಿಸಿದರು.

ಇಗಾ ಅವರು ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದರು. ಯಾವುದೇ ಹಂತದಲ್ಲಿಯೂ ಅನಾಸ್ತೇಸಿಯಾ ಅವರಿಂದ ಪ್ರತಿರೋಧ ಎದುರಾಗಲೇ ಇಲ್ಲ. 40 ನಿಮಿಷಗಳಲ್ಲಿಯೇ ಪಂದ್ಯ ಮುಗಿಯಿತು. 

ನೊವಾಕ್ ಜಯಭೇರಿ: ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ ಜಯಗಳಿಸಿದರು. ಅಗ್ರಶ್ರೇಯಾಂಕದ ನೊವಾಕ್  7-5, 6-7 (6), 2-6, 6-3, 6-0ಯಿಂದ ಇಟಲಿಯ ಲೊರೆಂಜೊ ಮಸೆಟಿ ವಿರುದ್ಧ ಜಯಿಸಿದರು. 

ಬೋಪಣ್ಣ ಜೋಡಿ ಮುನ್ನಡೆ: ಎರಡನೇ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಆರಂಭಿಕ ಸುತ್ತಿನಲ್ಲಿ ಬ್ರೆಜಿಲ್‌ನ ಒರ್ನಾಡೊ ಲುಜ್ ಮತ್ತು ಮಾರ್ಸೆಲೊ ಜೊರ್ಮನ್ ಅವರನ್ನು ಸೋಲಿಸಿದರು.

2 ಗಂಟೆ ಏಳು ನಿಮಿಷ ನಡೆದ ಸೆಣ ಸಾಟದಲ್ಲಿ ಬ್ರೆಜಿಲ್ ಜೋಡಿ 7-5, 4-6, 6-4 ಸೆಟ್‌ ಗಳಿಂದ ಸೋಲನುಭವಿಸಿತು. ಭಾರತ–ಆಸ್ಟ್ರೇಲಿಯಾ ಜೋಡಿ ಮೊದಲ ಸೆಟ್ ಅನ್ನು ಟ್ರೈ ಬ್ರೇಕರ್‌ನಲ್ಲಿ ಗೆದ್ದುಕೊಂಡಿತು. ಆದರೆ, ಎರಡನೇ ಸೆಟ್‌ನಲ್ಲಿ ಪುಟಿದೆದ್ದ ಬ್ರೆಜಿಲ್ ಜೋಡಿ ಪ್ರತಿರೋಧ ತೋರಿತು. ಆದರೆ ಮೂರನೇ ಸೆಟ್‌ನಲ್ಲಿ ನಿಖರ ಆಟದ ಮೂಲಕ ಹಿಡಿತ ಸಾಧಿಸಿ, ಎದುರಾಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡದೆ ರೋಹನ್–ಎಬ್ಡೆನ್ ಗೆದ್ದುಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT