ಟೆನಿಸ್‌: ಭಾರತಕ್ಕೆ ಜಯ

7

ಟೆನಿಸ್‌: ಭಾರತಕ್ಕೆ ಜಯ

Published:
Updated:

ಅಸ್ತಾನ, ಕಜಕಸ್ತಾನ: ಅಂಕಿತಾ ರೈನಾ ಅವರ ಮಿಂಚಿನ ಆಟದ ನೆರವಿನಿಂದ ಭಾರತ ತಂಡ ಫೆಡ್‌ ಕಪ್‌ ಟೆನಿಸ್‌ ಏಷ್ಯಾ ಒಸೀನಿಯಾ ಗುಂಪು–1 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗೆದ್ದಿದೆ.

ಗುರುವಾರ ನಡೆದ ಹಣಾಹಣಿಯಲ್ಲಿ ಭಾರತ 2–1ರಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಕರ್ಮನ್‌ಕೌರ್‌ ಥಾಂಡಿ 2–6, 6–3, 3–6ರಲ್ಲಿ ನುಡಿಂದಾ ಲುವಾಂಗಮ್‌ ಎದುರು ಆಘಾತ ಕಂಡರು.

ಎರಡನೇ ಸಿಂಗಲ್ಸ್‌ನಲ್ಲಿ ಅಂಕಿತಾ 6–7, 6–2, 6–4ರಲ್ಲಿ ಪೀಂಗ್‌ತರನ್‌ ಪ್ಲಿಪುಯೆಚ್‌ ಅವರನ್ನು ಮಣಿಸಿದರು.

ಡಬಲ್ಸ್‌ನಲ್ಲಿ ಅಂಕಿತಾ ಮತ್ತು ಕರ್ಮನ್‌ 6–4, 6–7, 7–5ರಲ್ಲಿ ಪೀಂಗ್‌ತರನ್‌ ಮತ್ತು ನುಡಿಂದಾ ಅವರನ್ನು ಸೋಲಿಸಿ ಭಾರತದ ಖುಷಿಗೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !