ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ಸೈನಾ, ಶ್ರೀಕಾಂತ್‌

ಜಪಾನ್ ಓಪನ್ ಸೂಪರ್‌ ಸೀರಿಸ್‌: ಪ್ರಣಯ್‌, ಸಮೀರ್ ವರ್ಮಾಗೆ ಗೆಲುವು
Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌, ಸಮೀರ್ ವರ್ಮಾ ಮತ್ತು ಎಚ್.ಎಸ್.ಪ್ರಣಯ್‌ ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತು ಪ್ರವೇಶಿಸಿದರು. ಆದರೆ ಸಾಯಿಪ್ರಣೀತ್ ಮತ್ತು ಸೌರಭ್ ವರ್ಮಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಕಾಲುನೋವಿನಿಂದ ಬಳಲಿದ್ದ ಸೈನಾ ನೆಹ್ವಾಲ್‌  ಅವರು ಕಳೆದ ವಾರ ಮುಕ್ತಾಯಗೊಂಡ ಕೊರಿಯಾ ಓಪನ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಅದಕ್ಕೂ ಮುನ್ನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದರು.

ಜಪಾನ್ ಓಪನ್‌ನಲ್ಲಿ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಥಾಯ್ಲೆಂಡ್ ಆಟಗಾರ್ತಿ ಪೊಂಪಾವಿ ಚೊಚುವಾಂಗ್ ವಿರುದ್ಧ 21–17, 21–9ರಿಂದ ಗೆಲುವು ದಾಖಲಿಸಲು ಅವರು ತೆಗೆದುಕೊಂಡದ್ದು ಕೇವಲ 39 ತಿಯಾನ್ ಹೊಯ್‌ ಅವರನ್ನು 21–15, 12–21, 21–11ರಿಂದ ಮಣಿಸಿದರು.

ಈ ಹಿಂದೆ ಇವರಿಬ್ಬರು ಆರು ಬಾರಿ ಮುಖಾಮುಖಿಯಾಗಿದ್ದಾಗ ಐದರಲ್ಲೂ ಶ್ರೀಕಾಂತ್ ಜಯ ಗಳಿಸಿದ್ದರು. ತಿಯಾನ್ ಬುಧವಾರವೂ ಸುಲಭವಾಗಿ ಮಣಿದರು. ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಹಾಂಕಾಂಗ್‌ನ ಹು ಯುನ್ ಅವರನ್ನು ಎದುರಿಸುವರು.

ಪ್ರಣಯ್‌, ಸಮೀರ್‌ಗೆ ಜಯ
ಯು.ಎಸ್‌.ಓಪನ್‌ ಗ್ರ್ಯಾಂಡ್‌ ಪ್ರಿಕ್ಸ್‌ ಗೋಲ್ಡ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಎತ್ತಿ ಹಿಡಿದಿದ್ದ ಎಚ್‌.ಎಸ್‌.ಪ್ರಣಯ್‌ ಮತ್ತು ಸೈಯದ್‌ ಮೋದಿ ಗ್ರ್ಯಾಂಡ್‌ ಪ್ರಿಕ್ಸ್‌ ಗೋಲ್ಡ್‌ ಚಾಂಪಿಯನ್‌ಷಿಪ್‌ನ ವಿಜೇತ ಸಮೀರ್ ವರ್ಮಾ ಕೂಡ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತು ಪ್ರವೇಶಿಸಿದರು. ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸನ್‌ ಅವರನ್ನು 21–12, 21–14ರಿಂದ ಪ್ರಣಯ್‌ ಮಣಿಸಿದರೆ ಥಾಯ್ಲೆಂಡ್‌ನ ಖೊಸಿಟ್‌ ಫೆಟ್‌ಪ್ರದಾಬ್ ಅವರನ್ನು 21–12, 21–19ರಿಂದ ಸಮೀರ್‌ ಮಣಿಸಿದರು.

ಅಶ್ವಿನಿ–ಸಾತ್ವಿಕ್ ಜೋಡಿಗೆ ಜಯ
ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯ್‌ರಾಜ್‌ ರಂಕಿರೆಡ್ಡಿ ಜೋಡಿ ಥಾಯ್ಲೆಂಡ್‌ನ ಟಿನ್ ಇಸ್ರಿಯಾನೆತ್‌ ಮತ್ತು ಪಚಾರಪುನ್‌ ಚೊಚುವಾಂಗ್ ಅವರನ್ನು 21–17, 21–13ರಿಂದ ಮಣಿಸಿದರು. ಆದರೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೋಲು ಕಂಡಿತು.

ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ ಕೂಡ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಸೌರಭ್ ವರ್ಮಾ ಮತ್ತು ಬಿ.ಸಾಯ್ ಪ್ರಣೀತ್ ನಿರಾಸೆ ಅನುಭವಿಸಿದರು.

ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಲಿನ್ ಡ್ಯಾನ್ ಅವರ ಎದುರು ಸೌರಭ್‌ 21–11, 15–21, 13–21ರಿಂದ ಸೋತರು. ಸಾಯ್ ಪ್ರಣೀತ್‌ ಕೊರಿಯಾದ ಲೀ ಡಾಂಗ್ ಕ್ಯೂನ್ ಎದುರು 23–21, 17–21, 14–21ರಿಂದ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT