ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಗ್ರ್ಯಾನ್ ಪ್ರಿ ಮೊದಲ ಲೆಗ್‌ | ಜಾವೆಲಿನ್: ಕರ್ನಾಟಕದ ಮನು ಪ್ರಥಮ

Published 30 ಏಪ್ರಿಲ್ 2024, 20:43 IST
Last Updated 30 ಏಪ್ರಿಲ್ 2024, 20:43 IST
ಅಕ್ಷರ ಗಾತ್ರ

ಬೆಂಗಳೂರು: ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಆಯ್ಕೆಯಾಗಲು ದೇಶದ ಪ್ರಮುಖ ಅಥ್ಲೀಟ್‌ಗಳು ಮಂಗಳವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ ಮೊದಲ ಲೆಗ್‌ನಲ್ಲಿ ಸಾಮರ್ಥ್ಯ ಪ್ರದರ್ಶಿಸಿದರು. ಆದರೆ ಒಲಿಂಪಿಕ್ಸ್ ಅರ್ಹತಾ ಮಟ್ಟದ ಗುರಿ ತಲುಪುವಲ್ಲಿ ವಿಫಲರಾದರು. 

ತವರಿನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜಾವೆಲಿನ್‌ ಥ್ರೋ ಸ್ಪರ್ಧಿ ಮನು ಅವರು 81.91 ಮೀಟರ್ ಎಸೆದು ಪ್ರಥಮ ಸ್ಥಾನ ಪಡೆದರು. ಆದರೆ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (84.35 ಮೀ.) ಬಹಳ ಹಿಂದೆಯಿತ್ತು. ಒಲಿಂಪಿಕ್ಸ್ ಅರ್ಹತಾ ಮಟ್ಟ 85.50 ಮೀ. ಎಂದು ನಿಗದಿ ಪಡಿಸಲಾಗಿತ್ತು.

ಮಹಾರಾಷ್ಟ್ರದ ಉತ್ತಮ್ ಬಾಳಾಸಾಹೇಬ್ ಪಾಟೀಲ್ (76.81 ಮೀ) ಹಾಗೂ ಉತ್ತರ ಪ್ರದೇಶದ ವಿಕಾಸ್ ಯಾದವ್ (75.99 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಇತರ ಅಂತರರಾಷ್ಟ್ರೀಯ ಅಥ್ಲೀಟುಗಳೂ ತಮ್ಮ ವಿಭಾಗಗಳಲ್ಲಿ ಮೊದಲ ಸ್ಥಾನವನ್ನು ಪಡೆದರೂ, ಅರ್ಹತಾ ಮಟ್ಟದ ಸಮೀಪ ಬರಲಿಲ್ಲ.

ಫಲಿತಾಂಶಗಳು ಇಂತಿವೆ:

ಪುರುಷರ ವಿಭಾಗ: 100 ಮೀಟರ್‌ ಓಟ: ಲಾಲು ಪ್ರಸಾದ್ ಭಾಯ್ (ಒಡಿಶಾ) –1, ಹಸನ್ ಸಾಯಿದ್ (ಮಾಲ್ಡೀವ್ಸ್‌)–2, ಆರ್ಯನ್ ಮನೋಜ್ (ಕರ್ನಾಟಕ)–3, ಕಾಲ: 10.64 ಸೆ.; ರೇಸ್‌ ಬಿ: ಜಿಟ್ಸನ್ (ತಮಿಳುನಾಡು)–1,  ಆರ್ಯನ್ ಎಕ್ಕಾ (ಒಡಿಶಾ)–2, 3.ಜೊನಾಥನ್ ಸ್ಯಾಮ್ಯುಯೆಲ್ ಜಾರ್ಜ್ (ಕರ್ನಾಟಕ)–3, ಕಾಲ: 10.69 ಸೆ.; ರೇಸ್ ಸಿ: 1. ಅನಿಮೇಶ್ (ಒಡಿಶಾ)–1, ಜಯ್ ಶಾ (ಮಹಾರಾಷ್ಟ್ರ)–2, ಸಾಹಿಬ್ ಸಿಂಗ್ (ಮಹಾರಾಷ್ಟ್ರ)–3, ಕಾಲ: 10.51 ಸೆ.; ರೇಸ್ ಡಿ. 1.ಅಕ್ಷಯ್ ಎಕೋಣಕರ್ (ಮಹಾರಾಷ್ಟ್ರ)–1, ಅರಿಜಿತ್ ರಾಣಾ (ಪಶ್ಚಿಮ ಬಂಗಾಲ)–2, ಸುಧಾಕರ್ ಚಿಂತಾ (ತೆಲಂಗಾಣ)–3, ಕಾಲ: 10.71 ಸೆ.‌

200 ಮೀಟರ್ ಓಟ: 1. ಅನಿಮೇಶ್ ಕುಜೂರ್‌ (ಒಡಿಶಾ)–1, ಜೈ ಶಾ (ಮಹಾರಾಷ್ಟ್ರ)–2, ನಲುಬೋತು ಷಣ್ಮುಗ (ಆಂಧ್ರಪ್ರದೇಶ)–3, ಕಾಲ: 20.97 ಸೆ.; ರೇಸ್ ಬಿ: ಕೆ.ಎಸ್.ಪ್ರಣವ್‌ (ಕೇರಳ)–1, ಸಿ.ಎಚ್.ರಿಹಾನ್ (ಕರ್ನಾಟಕ)–2, ಜಗತ್ ಗೌಡ (ಕರ್ನಾಟಕ)–3, ಕಾಲ: 21.90 ಸೆ.; 800 ಮೀಟರ್‌ ಓಟ: ರೇಸ್ ಎ: ಅಂಕೇಶ್ ಚೌಧರಿ (ಹಿಮಾಚಲ ಪ್ರದೇಶ)–1, ಮೊಹಮದ್ ಅಫ್ಜಲ್ (ಕೇರಳ)–2, ಶ್ರೀಕಿರಣ್ (ತಮಿಳುನಾಡು)–3; ಕಾಲ: 47.72 ಸೆ.; ರೇಸ್ ಬಿ: ಸಾಹಿಲ್ ಖಾನ್ (ರಾಜಸ್ಥಾನ)–1, ಹರ್ಜೋತ್ ಸಿಂಗ್ (ಪಂಜಾಬ್)–2, ರಾಹುಲ್ ಚೌಹಾನ್ (ಕರ್ನಾಟಕ)–3, ಕಾಲ: 1ನಿ.50.18 ಸೆ.

ಟ್ರಿಪಲ್‌ ಜಂಪ್: ಪ್ರವೀಣ್ ಚಿತ್ರವೇಲ್ (ತಮಿಳುನಾಡು)–1, ಎಲ್ದೋಸ್ ಪಾಲ್ (ಕೇರಳ) –2, ಮೊಹಮ್ಮದ್ ಸಲಾವುದ್ದೀನ್ (ತಮಿಳುನಾಡು)–3, ದೂರ: 17.12 ಮೀ.‍; ಹೈಜಂಪ್‌: ಜೆಸ್ಸಿ ಸಂದೇಶ್ (ಕರ್ನಾಟಕ)–1, ಆದರ್ಶ್‌ರಾಮ್ (ತಮಿಳುನಾಡು)–2, ಸುದೀಪ್ (ಕರ್ನಾಟಕ)–3, ಎತ್ತರ: 2.20 ಮೀ.; ಲಾಂಗ್‌ಜಂಪ್‌: ಆದಿತ್ಯ ಕುಮಾರ್ ಸಿಂಗ್ (ಮಧ್ಯಪ್ರದೇಶ)–1, ಇ.ಅರವಿಂತ್ (ತಮಿಳುನಾಡು)–2, 3.ಎಸ್.ಆರ್ಯ (ಕರ್ನಾಟಕ)–3, ದೂರ: 8.01 ಮೀ.

ಜಾವೆಲಿನ್‌: ಮನು ಡಿ.ಪಿ. (ಕರ್ನಾಟಕ)–1, ಉತ್ತಮ್ ಬಾಳಾಸಾಹೇಬ ಪಾಟೀಲ (ಮಹಾರಾಷ್ಟ್ರ)–2, ವಿಕಾಸ್ ಯಾದವ್ (ಉತ್ತರ ಪ್ರದೇಶ)–3, ದೂರ: 81.91 ಮೀ.

ಮಹಿಳಾ ವಿಭಾಗ: 

100 ಮೀಟರ್ ಓಟ: ರೇಸ್ ಎ: ನಿತ್ಯಾ ಗಂಧೆ (ತೆಲಂಗಾಣ) –1, 11.78, ಶ್ರಬಾನಿ ನಂದಾ (ಒಡಿಶಾ)–2, ವಿ ಸುದೀಕ್ಷಾ (ಕರ್ನಾಟಕ)–3, ಕಾಲ: 11.78 ಸೆ.; ರೇಸ್ ಬಿ. 1.ಮೇಧಾ ಆರ್‌. ಕಾಮತ್ (ಕರ್ನಾಟಕ)–1. ಕಾವೇರಿ ಎಲ್‌.ಪಾಟೀಲ (ಕರ್ನಾಟಕ)–2, ಸರೋಜ್ ಪುಷ್ಪರಾಜ್ ಶೆಟ್ಟಿ (ಮಹಾರಾಷ್ಟ್ರ)–3, ಕಾಲ: 12.16 ಸೆ.

200 ಮೀಟರ್‌ ಓಟ: ರೇಸ್ ಎ 1. ವಿಸ್ಮಯಾ ವಿ.ಕೆ. (ಕೇರಳ)–1, ನಿತ್ಯಾ ಗಂಧೆ (ತೆಲಂಗಾಣ)–2, ಶ್ರಬಾನಿ ನಂದಾ (ಒಡಿಶಾ)–3, ಕಾಲ: 23:96 ಸೆ.; ರೇಸ್‌ ಬಿ: ಚೆಲಿಮಿ (ಆಂದ್ರಪ್ರದೇಶ)–1, ಕೆ.ಸ್ನೇಹಾ (ಕೇರಳ)–2, ದೇವಯಾನಿಬಾ ಮಹೇಂದ್ರಸಿನ್ (ಗುಜರಾತ್)–3. ಕಾಲ: 23.92 ಸೆ.; 800 ಮೀ. ಓಟ: ಲಕ್ಷ್ಮೀಪ್ರಿಯಾ ಕಿಸನ್ (ಒಡಿಶಾ)–1, ಅರ್ಪಿತಾ ಇ.ಬಿ. (ಕರ್ನಾಟಕ)–2, ಶಿವಾನಿ ಕುಮಾರಿ (ಬಿಹಾರ)–3, ಕಾಲ: 2ನಿ.10.88 ಸೆ.

3000 ಮೀ ಸ್ಟಿಪಲ್ ಚೇಸ್‌: ಸೋನಂ (ದೆಹಲಿ)–1, ನಿಕಿತ್ (ರಾಜಸ್ಥಾನ)–2, ಸುಶ್ಮಿತ್ ಟಿಗ್ಗ (ಒಡಿಶಾ)–3, ಕಾಲ: 10 ನಿ.43.65 ಸೆ.

ಹೈಜಂಪ್‌: 1.ಅಭಿನಯಾ ಶೆಟ್ಟಿ (ಕರ್ನಾಟಕ)–1, ಮೊಹರ್ ಮುಖರ್ಜಿ (ಪಶ್ಚಿಮ ಬಂಗಾಳ)–2. ಎತ್ತರ: 1.71 ಮೀ.; ಟ್ರಿಪಲ್ ಜಂಪ್: ಎನ್.ವಿ.ಶೀನಾ (ಕೇರಳ)–1, ಗಾಯತ್ರಿ ಶಿವಕುಮಾರ್ (ಕೇರಳ)–2, ಶಾರ್ವರಿ ಅವಿನಾಶ್ ಪರುಲೆ (ಮಹಾರಾಷ್ಟ್ರ)–3, ದೂರ: 13. 48 ಮೀ.;  ಲಾಂಗ್‌ ಜಂಪ್‌: 1. ಶೈಲಿ ಸಿಂಗ್ (ಉತ್ತರ ಪ್ರದೇಶ)–1, ನಯನಾ ಜೇಮ್ಸ್‌ (ಕೇರಳ)–2, ಸುಶ್ಮಿತಾ (ರಾಜಸ್ಥಾನ)–3, ದೂರ: 6.52 ಮೀ.

ಶಾಟ್‌ಪಟ್: ಅಭಾ ಖತುವಾ (ಮಹಾರಾಷ್ಟ್ರ)–1, ವಿ.ಅಂಬಿಕಾ (ಕರ್ನಾಟಕ)–2, ದೂರ: 16.59 ಮೀ.; ಜಾವೆಲಿನ್ ಥ್ರೊ: ಕೆ.ರೇಷ್ಮಾ (ಆಂಧ್ರ ಪ್ರದೇಶ) –1, 2.ರಮ್ಯಶ್ರೀ ಜೈನ್ (ಕರ್ನಾಟಕ)–2, ವಿಶಾಖಾ ಪನ್ವರ್‌ (ಉತ್ತರ ಪ್ರದೇಶ)–3, ದೂರ: 53.77 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT