ಆದರೆ ಭಾರತಕ್ಕೆ ಸುದೀರ್ಘ ಜತೆಯಾಟ ಆಡಲು ಸಾಧ್ಯವಾಗಲಿಲ್ಲ. ಶಿವಂ ಚೌಧರಿ (12), ಕರಣ್ ಶರ್ಮಾ (19), ಧವಳ್ ಕುಲಕರ್ಣಿ (24) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ಗಳಲ್ಲಿ ಮಿಂಚು ಹರಿಸಿದ ಬೌಲರ್ ಜಯದೇವ್ ಉನದ್ಕತ್ 24 ಎಸೆತಗಳಲ್ಲಿಯೇ 44 ರನ್ ಗಳಿಸಿದ್ದರು. ಆದರೆ ಕೆಟ್ಟ ಹೊಡೆತಕ್ಕೆ ಮುಂದಾದ ಅವರು ಮ್ಯಾಟ್ ಹೆನ್ರಿ ಅವರ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಹೊರನಡೆದರು. ಇದರಿಂದ ಇಲೆವನ್ ತಂಡ ನಿರಾಸೆ ಅನುಭವಿಸಿತು.