ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ನಡೆದಿರುವ ಟೆಸ್ಟ್ನ ಎರಡನೇ ದಿನ ಶುಕ್ರವಾರದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅಮೋಘ ದ್ವಿಶತಕ ಗಳಿಸುವ ಮೂಲಕ ಭಾರತ ತಂಡ ಮೊದಲನೆ ಇನ್ನಿಂಗ್ಸ್ನಲ್ಲಿ 166 ಒವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 687 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಮೋಘ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದರು. ಇದರೊಂದಿಗೆ ತಂಡದಲ್ಲಿ ಮತ್ತೊಂದು ಸಾಧನೆಯ ಸಂಭ್ರಮ ಮನೆಮಾಡಿತು.
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ನ ಎರಡನೇ ದಿನದ ಕೊನೆಗೆ 14 ಒವರ್ಗಳಲ್ಲಿ 41 ರನ್ ಗಳಿಸಿದೆ.
ಕೊಹ್ಲಿ ಸಾಧನೆ: ಪ್ರಸ್ತುತ ಸರಣಿಯಲ್ಲಿ ದ್ವಿಶತಕ ಸಿಡಿಸಿರುವ ಕೊಹ್ಲಿ ವೆಸ್ಟ್ಇಂಡಿಸ್, ನ್ಯುಜಿಲೆಂಡ್, ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲೂ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 200 ರನ್, ಅಕ್ಟೊಬರ್ನಲ್ಲಿ ನ್ಯುಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 211 ರನ್, ಡಿಸೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 235 ರನ್ ಕಲೆಹಾಕಿದ್ದರು. ಪ್ರಸ್ತುತ ಬಂಗ್ಲಾವಿರುದ್ಧದ ಪಂದ್ಯದಲ್ಲಿ 204 ರನ್ ಗಳಿಸಿದರು.