ಪ್ಯಾಂಗ್ಯಾಂಗ್ : ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ಮಹಿಳಾ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಗೆಲುವು ಪಡೆದಿದೆ.

ಮಂಗಳವಾರ ನಡೆದ ಹಣಾಹಣಿ ಯಲ್ಲಿ ಭಾರತ 2–0 ಗೋಲುಗಳಿಂದ ಹಾಂಕಾಂಗ್ ತಂಡವನ್ನು ಮಣಿಸಿತು. ಸುಷ್ಮಿತಾ ಮಲಿಕ್ 68ನೇ ನಿಮಿಷ ದಲ್ಲಿ ಮೊದಲ ಗೋಲು ಗಳಿಸಿದರೆ, ರತನಬಾಲಾ ದೇವಿ 70ನೇ ನಿಮಿಷದಲ್ಲಿ ತಂಡಕ್ಕೆ ಎರಡನೇ ಗೋಲು ತಂದು ಕೊಟ್ಟು ಗೆಲುವಿಗೆ ಕಾರಣರಾದರು. ಇದರೊಂದಿಗೆ ಟೂರ್ನಿಯಲ್ಲಿ ಒಂದು ಗೆಲುವಿನೊಂದಿಗೆ ತಂಡ ತನ್ನ ಹೋರಾಟ ಮುಗಿಸಿತು.

ಆರಂಭದ ಮೂರು ಪಂದ್ಯಗಳಲ್ಲಿ ಭಾರತ ತಂಡ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಸೋತಿದ್ದಾಗಲೇ ಟೂರ್ನಿಯಿಂದ ಹೊರಬಿದ್ದಿತ್ತು. ‘ಬಿ’ ಗುಂಪಿನಲ್ಲಿರುವ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಮೂರು ಪಾಯಿಂಟ್ಸ್ ಸಂಗ್ರಹಿಸಿತು.

ಕಿಮ್ ಸುಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲ ಅವಧಿಯಿಂದಲೇ ಗೋಲು ಗಳಿಸಲು ಉತ್ತಮ ಹೋರಾಟ ನಡೆಸಿತು. ಆದರೆ ಎದುರಾಳಿ ಹಾಂಕಾಂಗ್ ತಂಡದ ಭದ್ರ ರಕ್ಷಣಾಕೋಟೆ ಭೇದಿಸಲು ಸಾಧ್ಯ ವಾಗಲಿಲ್ಲ. ದ್ವಿತೀಯಾರ್ಧದ ಆಟದ ಕೊನೆಯಲ್ಲಿ ಎರಡು ಗೋಲುಗಳನ್ನು ಗಳಿಸಿದ್ದರಿಂದ ತನ್ನ ಕೊನೆಯ ಪಂದ್ಯದಲ್ಲಿ ಯೂ ಭಾರತಕ್ಕೆ ಗೆಲುವು ಪಡೆಯಲು ಸಾಧ್ಯವಾಯಿತು.

ಪಂದ್ಯದ ಐದನೇ ನಿಮಿಷದಲ್ಲಿ ಬಾಲಾ ದೇವಿ ನೀಡಿದ್ದ ಪಾಸ್‌ನ ನೆರವು ಪಡೆದು ಚೆಂಡನ್ನು ಗುರಿ ಸೇರಿಸಲು ರತನಬಾಲಾ ದೇವಿ ಮಾಡಿದ ಪ್ರಯತ್ನಕ್ಕೆ ಎದುರಾಳಿ ತಂಡದವರು ಅವಕಾಶ ಕೊಡಲಿಲ್ಲ. ಈ ಇಬ್ಬರೂ ಆಟಗಾರ್ತಿ ಯರ ಉತ್ತಮ ಹೊಂದಾಣಿಕೆಯ ಆಟದಿಂದ 30ನೇ ನಿಮಿಷದಲ್ಲಿಯೂ ಗೋಲು ಗೋಳಿಸಲು ಭಾರತಕ್ಕೆ ಅವಕಾಶ ಲಭಿಸಿತ್ತು.
ಹಾಂಕಾಂಗ್ ತಂಡದ ನಾಯಕಿ ಚೇನ್ ವಿಂಗ್ ಜೀ ಮತ್ತು ವಾಂಗ್ ಮಿನ್ ಯಾನ್ ಅವರಿಂದ ಹಾದು ಬಂದ ಚೆಂಡನ್ನು ಗುರಿ ಸೇರಿಸಲು

ಚೆಯುಂಗ್ ವೇಯಿ ಕೀ ಸೊಗಸಾಗಿ ಪ್ರಯತ್ನಿಸಿದರು. ಆದರೆ ಭಾರತದ ಗೋಲ್‌ಕೀಪರ್ ಪಂಥೋಯ್ ಚಾನು ಇದಕ್ಕೆ ಅವಕಾಶ ನೀಡಲಿಲ್ಲ.
‘ಕೊನೆಯ ಪಂದ್ಯದಲ್ಲಿ ನಮ್ಮ ತಂಡದವರು ಚೆನ್ನಾಗಿ ಆಡಿದರು. ಈ ಟೂರ್ನಿಯಿಂದಾಗಿ ಹಲವಾರು ವಿಷಯ ಗಳನ್ನು ತಿಳಿದುಕೊಂಡೆವು’ ಎಂದು ಕೋಚ್ ಸಾಜಿದ್ ದಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.