ನವದೆಹಲಿ: ಮುಂದಿನ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಶೂಟಿಂಗ್ ಸ್ಪರ್ಧೆಯನ್ನು ತೆಗೆದು ಹಾಕಿದರೆ ಭಾರತ ಕೂಟವನ್ನೇ ಬಹಿಷ್ಕರಿಸಬೇಕಾದೀತು ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆ ಎಚ್ಚರಿಕೆ ನೀಡಿದೆ.
ಮುಂದಿನ ಕಾಮನ್ವೆಲ್ತ್ ಕೂಟ ಬರ್ಮಿಂಗ್ಹ್ಯಾಂನಲ್ಲಿ ನಡೆಯಲಿದೆ. ಆ ಕೂಟದಲ್ಲಿ ಶೂಟಿಂಗ್ ಬೇಕೇ ಬೇಡವೇ ಎಂಬುದನ್ನು ಆತಿಥೇಯರು ನಿರ್ಧರಿಸಬೇಕು ಎಂದು ಕಾಮನ್ವೆಲ್ತ್ ಕೂಟದ ಫೆಡರೇಷನ್ ಸೂಚಿಸಿದೆ. ಇದಕ್ಕೆ ರೈಫಲ್ ಸಂಸ್ಥೆ ಅಧ್ಯಕ್ಷ ರಣಿಂದರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.