ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆದರ್‌ಲೆಂಡ್‌: ಗಾಂಧಿ ಜನ್ಮ ದಿನ ಸ್ಮರಣಾರ್ಥ ವಿವಿಧ ಕಾರ್ಯಕ್ರಮ

Last Updated 22 ಸೆಪ್ಟೆಂಬರ್ 2019, 17:06 IST
ಅಕ್ಷರ ಗಾತ್ರ

ಹೇಗ್‌: ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಸ್ಮರಣಾರ್ಥ ನೆದರ್‌ಲೆಂಡ್‌ನಲ್ಲಿ ಮುಂದಿನ ವಾರ ಅಹಿಂಸಾ ಮೆರವಣಿಗೆಯ ಜೊತೆಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೈಕಲ್‌ ರ‍್ಯಾಲಿ, ಗಾಂಧಿ ಜೀವನ ಕುರಿತಾದ ಛಾಯಾಚಿತ್ರ ಪ್ರದರ್ಶನ, ಶಾಲಾ ಮಕ್ಕಳಲ್ಲಿ ಗಾಂಧಿ ತತ್ವಗಳ ಅರಿವು, ಸ್ಮರಣಾರ್ಥ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಗಾಂಧಿ ಅಹಿಂಸಾತ್ಮಕ ಪ್ರತಿಷ್ಠಾನ ಮತ್ತು ಇತರ ಸಂಘಗಳ ಸಹಕಾರದೊಂದಿಗೆ ಭಾರತದ ರಾಯಭಾರ ಕಚೇರಿ ಆಯೋಜಿಸಿದೆ.ದೇಶದಲ್ಲಿರುವ ನಾಲ್ಕು ಗಾಂಧಿ ಪ್ರತಿಮೆಯ ಸಮೀಪ ಈ ಕಾರ್ಯಕ್ರಮಗಳು ನಡೆಯಲಿವೆ.

ಸೆ. 29 ರಂದು ಸೈಕಲ್‌ ರ‍್ಯಾಲಿಯ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಈ ವೇಳೆಗಾಂಧೀಜಿ ಅವರ ಆದರ್ಶಗಳಾದ ಸರಳತೆ ಮತ್ತು ಸುಸ್ಥಿರತೆಯ ಕುರಿತು ಜಾಗೃತಿ ಮೂಡಿಸಲಾಗುವುದು ಎಂದುಭಾರತದ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೆ.24ರಿಂದ ಅ.3ರವರೆಗೆ ಸ್ವಯಂಸೇವಕರು ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ‘ಮಹಾತ್ಮರನ್ನು ಅನುಸರಿಸಿ’ ಅಭಿಯಾನ ನಡೆಸಿಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಅಹಿಂಸಾ ಸಂದೇಶ ಮತ್ತು ಜಗತ್ತಿನಲ್ಲಿ ಗಾಂಧಿ ಮೌಲ್ಯಗಳ ಪ್ರಸ್ತುತತೆಯ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಇಪ್ಪತ್ತೈದು ಶಾಲೆಗಳ 1,600 ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.ಅಹಿಂಸಾ ಮೆರವಣಿಗೆಯಲ್ಲಿ 300 ಶಾಲಾ ವಿದ್ಯಾರ್ಥಿಗಳು ಮತ್ತು 150 ಯುವಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT