ಗುರುವಾರ , ಡಿಸೆಂಬರ್ 12, 2019
26 °C

ಬುಲಂದ್‌ಶಹರ್‌ ಹಿಂಸಾಚಾರ: ಪ್ರಮುಖ ಆರೋಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಮೀರಟ್‌ (ಉತ್ತರ ಪ್ರದೇಶ): ಬುಲಂದ್‌ಶಹರ್‌ನಲ್ಲಿ ಕಳೆದ ತಿಂಗಳು ಪೊಲೀಸ್‌ ಠಾಣೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಸ್ಥಳೀಯ ಮುಖಂಡ ಶಿಖರ್‌ ಅಗರ್‌ವಾಲ್‌ ಅಲಿಯಾಸ್‌ ಶೇಖರ್‌ನನ್ನು (25) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇನ್‌ಸ್ಪೆಕ್ಟರ್ ಮತ್ತು ನಾಗರಿಕ ಮೃತಪಟ್ಟಿದ್ದ ಘಟನೆಯಲ್ಲಿ ಗುಂಪನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪ ಈತನ ಮೇಲಿತ್ತು.

ಸುಮಾರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಪೊಲೀಸರು ಹಾಪುರ್‌ ಜಿಲ್ಲೆ ಬಳಿ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ
ಬಂಧನಕ್ಕೊಳಗಾದವರ ಸಂಖ್ಯೆ 36ಕ್ಕೆ ಏರಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು