ದಲಿತ ವೈದ್ಯೆಗೆ ಕುಡಿಯುವ ನೀರು ಕೊಡಲು ನಿರಾಕರಣೆ

7
ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿ ವಿರುದ್ಧ ದೂರು

ದಲಿತ ವೈದ್ಯೆಗೆ ಕುಡಿಯುವ ನೀರು ಕೊಡಲು ನಿರಾಕರಣೆ

Published:
Updated:

ಲಖನೌ: ದಲಿತ ಸಮುದಾಯಕ್ಕೆ ಸೇರಿದ ಪಶು ವೈದ್ಯೆಗೆ ಕುಡಿಯುವ ನೀರು ನೀಡಲು ನಿರಾಕರಿಸಿದ ಆಘಾತಕಾರಿ ಪ್ರಕರಣ ಉತ್ತರಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದಿದೆ.

ಕೌಶಾಂಬಿ ಜಿಲ್ಲೆಯ ಅಂಬಾವನ್‌ ಪುರಬ್‌ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಪರಿಶೀಲಿಸಲು ಉಪ ಪಶು ಅಧಿಕಾರಿಯೂ ಆಗಿರುವ  ಡಾ.ಸೀಮಾ ತೆರಳಿದ್ದಾಗ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮತ್ತು ಅಧ್ಯಕ್ಷ  ಕುಡಿಯುವ ನೀರು ನೀಡಲು ನಿರಾಕರಿಸಿದ್ದಾರೆ.

‘ಮಧುಮೇಹದಿಂದ ಬಳಲುತ್ತಿರುವ ನಾನು ಮನೆಯಿಂದ ಬಾಟಲಿಯಲ್ಲಿ ತಂದಿದ್ದ ನೀರು ಖಾಲಿಯಾಗಿತ್ತು. ಹೀಗಾಗಿ ಒಂದು ಗ್ಲಾಸ್‌ ನೀರು ಕೊಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಕೇಳಿದೆ. ಮೇಲ್ಜಾತಿಯವರಾದ ಈ ಇಬ್ಬರು ನೀರು ಕೊಡಲು ನಿರಾಕ
ರಿಸಿದರು. ಜತೆಗೆ ನನಗೆ ನೀರು ಕೊಡದಂತೆ ಇತರ ಗ್ರಾಮಸ್ಥರಿಗೂ ಸೂಚಿಸಿದರು’ ಎಂದು ಡಾ. ಸೀಮಾ ದೂರಿದ್ದಾರೆ.

‘ಸರ್ಕಾರಿ ಅಧಿಕಾರಿ ಜತೆಯೇ ಮೇಲ್ಜಾತಿಯವರು ಈ ರೀತಿ ನಡೆದುಕೊಂಡಿದ್ದಾರೆ. ಇನ್ನು ಸಾಮಾನ್ಯ ದಲಿತರ ಪಾಡು ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ’ ಎಂದು ತಿಳಿಸಿದ್ದಾರೆ.

ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಪ್ರಕರಣದ ಕುರಿತು ದೂರು ಸಲ್ಲಿಸಿರುವುದಾಗಿ ಡಾ. ಸೀಮಾ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಳ್ಳುವುದಾಗಿ ಡಿ.ಸಿ ತಿಳಿಸಿದ್ದಾರೆ.

ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪತ್‌ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ‘ಮಹಿಳಾ ಅಧಿಕಾರಿ ನೀರು ಕೇಳಿದ್ದರು. ಆದರೆ, ನೀರು ತರುವುದು ಸ್ವಲ್ಪ ವಿಳಂಬವಾಗಿದ್ದರಿಂದ ಸಭೆಯ ಮಧ್ಯದಲ್ಲೇ ತೆರಳಿದರು’ ಎಂದು ತಿಳಿಸಿದರು.

**

ನನಗೆ ನೀರು ಕೊಟ್ಟಿದ್ದರೆ ಅವರ ಪಾತ್ರೆ ಅಪವಿತ್ರ ಮತ್ತು ಹೊಲಸು ಆಗುತ್ತಿತ್ತೇ? ಜನರ ನಡವಳಿಕೆ ಬದಲಾಗಬೇಕು.

- ಡಾ. ಸೀಮಾ , ಪಶು ವೈದ್ಯೆ

ಬರಹ ಇಷ್ಟವಾಯಿತೆ?

 • 30

  Happy
 • 5

  Amused
 • 3

  Sad
 • 3

  Frustrated
 • 9

  Angry

Comments:

0 comments

Write the first review for this !