ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಅಧಿಕಾರಿ ಪುತ್ರನ ಬಂಧನ

7

ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಅಧಿಕಾರಿ ಪುತ್ರನ ಬಂಧನ

Published:
Updated:

ನವದೆಹಲಿ: ಅದು ಖಾಸಗಿ ಕಚೇರಿ, ಅಲ್ಲಿ ಯುವಕನೊಬ್ಬ ಯುವತಿಯ ಕೂದಲನ್ನು ಹಿಡಿದು ಎಳೆದಾಡುತ್ತ ದೈಹಿಕವಾಗಿ ಹಲ್ಲೆ ಮಾಡುತ್ತ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾನೆ. ಹಲ್ಲೆ ಮಾಡುತ್ತಿದ್ದ ಯುವಕನ ಗೆಳೆಯ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತಾನೆ. ದೈಹಿಕ ಹಿಂಸೆ ತಾಳದೇ ಯುವತಿ ಕಿರುಚಾಡುತ್ತಿದ್ದರೂ ಯಾರೊಬ್ಬರು ಸಹಾಯಕ್ಕೆ ದಾವಿಸಿದ ದಾರುಣ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.

ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ. ಯವತಿಯ ಮೇಲೆ ದಾಳಿ ಮಾಡಿದ ಯುವಕ ದೆಹಲಿ ಪೊಲೀಸ್‌ ಅಧಿಕಾರಿಯ ಮಗ ರೋಹಿತ್ ತೋಮರ್.  ಸೆಪ್ಟೆಂಬರ್ 2 ರಂದು ಇಲ್ಲಿನ ಉತ್ತಮ ನಗರದಲ್ಲಿರುವ ಖಾಸಗಿ ಕಂಪೆನಿಯ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಲ್ಲೆಗೆ ಒಳಗಾದ ಯುವತಿ ರೋಹಿತ್ ತೋಮರ್ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. 

ಈ ಘಟನೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದರು. ಶುಕ್ರವಾರ ಸಂಜೆ ದೆಹಲಿ ಪೊಲೀಸರು ಆರೋಪಿ ರೋಹಿತ್ ತೋಮರ್‌ನನ್ನು ಬಂಧಿಸಿದ್ದಾರೆ. 

ರೋಹಿತ್ ತೋಮರ್ ಯುವತಿಯನ್ನು ಕೂದಲು ಹಿಡಿದ ಎಳೆದಾಡುವುದು, ಹೊಟ್ಟೆಗೆ ಕಾಲಿನಿಂದ ಒದೆಯುವುದು, ಕಪಾಳಕ್ಕೆ ಬಾರಿಸುವುದು, ಮೊಣಕಾಲಿನಿಂದ ಕಿಕ್‌ ಮಾಡುವುದು ವಿಡಿಯೊದಲ್ಲಿದೆ. ಇದನ್ನು ಚಿತ್ರಿಕರಿಸುವ ಗೆಳೆಯ ’ರೋಹಿತ್ ಸಾಕು ನಿಲ್ಲಿಸು’ ಎಂದು ಹೇಳುತ್ತಿದ್ದರೂ ರೋಹಿತ್ ದೈಹಿಕ ಹಲ್ಲೆಯನ್ನು ಮುಂದುವರೆಸುತ್ತಾನೆ. ಕಚೇರಿಯಲ್ಲಿದ್ದ ಯಾರೊಬ್ಬರು ಈ ಹಲ್ಲೆ ತಡೆಯಲು ಮುಂದಾಗುವುದಿಲ್ಲ!

ಈ ವಿಡಿಯೊ ಗಮನಿಸಿದರೆ ಯುವತಿ ತೀವ್ರವಾದ ದೈಹಿಕ ಹಲ್ಲೆಗೆ ಒಳಗಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ದೆಹಲಿ ಪೊಲೀಸ್‌ ಆಯುಕ್ತರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು ಈ ಘಟನೆ ಬಗ್ಗ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿದ್ದೇನೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. 

ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಚೇರಿಗೆ ಇಬ್ಬರು ಯುವಕರನ್ನು ಕರೆಸಿ ನನ್ನ ಮೇಲೆ ಅತ್ಯಾಚಾರ ಮಾಡಿಸಲಾಯಿತು. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ನನ್ನ ಮೇಲೆ ಹಲ್ಲೆ ಮಾಡಲಾಯಿತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 12 ನೇ ತರಗತಿಯಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 1

  Sad
 • 0

  Frustrated
 • 19

  Angry

Comments:

0 comments

Write the first review for this !