ಎಮಿರೇಟ್ಸ್ ವಿಮಾನಗಳಲ್ಲಿ ‘ಹಿಂದೂ ಭೋಜನ’ ಮುಂದುವರಿಕೆ

7

ಎಮಿರೇಟ್ಸ್ ವಿಮಾನಗಳಲ್ಲಿ ‘ಹಿಂದೂ ಭೋಜನ’ ಮುಂದುವರಿಕೆ

Published:
Updated:

ನವದೆಹಲಿ: ಎಮಿರೇಟ್ಸ್ ವಿಮಾನಗಳಲ್ಲಿ ‘ಹಿಂದೂ ಭೋಜನ’ ಮುಂದುವರಿಸುವುದಾಗಿ ದುಬೈನ ವಿಮಾನ ಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಈ ಮೊದಲು ‘ಹಿಂದೂ ಭೋಜನ’ ನೀಡುವುದನ್ನು ಸ್ಥಗಿತಗೊಳಿಸು ವುದಾಗಿ ಸಂಸ್ಥೆ ಪ್ರಕಟಿಸಿತ್ತು. ಪ್ರಯಾಣಿಕರ ಸಲಹೆ ಮೇರೆಗೆ ಈ ನಿರ್ಧಾರವನ್ನು ವಾಪಸ್‌ ಪಡೆಯಲಾಯಿತು. ವೈವಿಧ್ಯಮಯವಾದ ‘ಪ್ರಾದೇಶಿಕ ಸಸ್ಯಾಹಾರ ಹಾಗೂ ವಿಶೇಷ ಭೋಜನ’ಗಳನ್ನು ಹಿಂದೂ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಂಸ್ಥೆ ಹೇಳಿತ್ತು.

‘ಗ್ರಾಹಕರಿಗೆ ನೀಡುವ ಉತ್ಪನ್ನಗಳು, ಸೇವೆಗಳ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸುತ್ತೇವೆ. ಇದರ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದರು. ‘ಹಿಂದೂ ಭೋಜನ’ದಲ್ಲಿ ಗೋಮಾಂಸ ಹೊರತುಪಡಿಸಿ ಉಳಿದ ಮಾಂಸಾಹಾರ ಪೂರೈಸಲಾಗುತ್ತದೆ.‌

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !