ಗೃಹ ಸಾಲ: ಮುಂಚೂಣಿಯಲ್ಲಿ ಮಹಾರಾಷ್ಟ್ರ

7
ಪುಣೆ, ಠಾಣೆ ಜತೆ ಸ್ಥಾನ ಹಂಚಿಕೊಂಡ ಬೆಂಗಳೂರು

ಗೃಹ ಸಾಲ: ಮುಂಚೂಣಿಯಲ್ಲಿ ಮಹಾರಾಷ್ಟ್ರ

Published:
Updated:
Prajavani

ಮುಂಬೈ: ಗೃಹ ನಿರ್ಮಾಣ, ಖರೀದಿ ಉದ್ದೇಶದ ಸಾಲ ನೀಡಿಕೆಯಲ್ಲಿ ಮಹಾರಾಷ್ಟ್ರ ರಾಜ್ಯವು ದೇಶದಲ್ಲಿಯೇ ಮುಂಚೂಣಿಯಲ್ಲಿ ಇದೆ.

ದೇಶದ ಹಣಕಾಸು ರಾಜಧಾನಿಯೂ ಆಗಿರುವ ಮುಂಬೈ ಹಾಗೂ ಠಾಣೆ, ಪುಣೆ ನಗರಗಳಲ್ಲಿ ಗೃಹ ಸಾಲಕ್ಕೆ ಭಾರಿ ಬೇಡಿಕೆ ಇದೆ. ಮಹಾರಾಷ್ಟ್ರದಲ್ಲಿ ನಗರೀಕರಣವು ಗರಿಷ್ಠ ಪ್ರಮಾಣದಲ್ಲಿ ಇರುವುದರಿಂದ ಒಟ್ಟಾರೆ ಗೃಹ ಸಾಲ ನೀಡಿಕೆಯಲ್ಲಿ ಶೇ 24ರಷ್ಟು ಪಾಲು ಹೊಂದಿರುವುದು ಸಾಲ ಮಾಹಿತಿ ಸಂಸ್ಥೆ ಕ್ರಿಪ್‌ ಹೈ ಮಾರ್ಕ್‌ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಸಾಫ್ಟ್‌ವೇರ್‌ ಮತ್ತು ತಂತ್ರಜ್ಞಾನ ಸಂಸ್ಥೆಗಳ ಕೇಂದ್ರವಾಗಿರುವ ಪುಣೆಯಲ್ಲಿಯೂ ಗೃಹ ಸಾಲಕ್ಕೆ ಗಮನಾರ್ಹ ಬೇಡಿಕೆ ಇದೆ. ಬೆಂಗಳೂರು ಸೇರಿದಂತೆ ಈ ನಾಲ್ಕು ಪ್ರಮುಖ ನಗರಗಳು ಗೃಹ ಸಾಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇವೆ.

ಒಂದು ವರ್ಷದ ಹಿಂದಿನ ಮಟ್ಟಕ್ಕೆ ಹೋಲಿಸಿದರೆ, ಒಟ್ಟಾರೆ ಗೃಹ ಹಣಕಾಸು ವಲಯವು ಶೇ 16.8ರಷ್ಟು ಏರಿಕೆ ದಾಖಲಿಸಿದೆ. ಸಾಲದ ಮೊತ್ತವು ₹ 17.9 ಲಕ್ಷ ಕೋಟಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

ಅಂಕಿ ಅಂಶ

ಸಂಸ್ಥೆಗಳು ; ಸಾಲದ ಪ್ರಮಾಣ (%)

ಗೃಹ ಹಣಕಾಸು ಕಂಪನಿಗಳು ; 42.90

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ; 39.70

ಖಾಸಗಿ ವಲಯದ ಬ್ಯಾಂಕ್‌ಗಳು ; 17.40

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !