ಕಮಲ್ ಸ್ಪರ್ಧೆ; ಉಳಿದ ಕುತೂಹಲ

ಗುರುವಾರ , ಏಪ್ರಿಲ್ 25, 2019
32 °C

ಕಮಲ್ ಸ್ಪರ್ಧೆ; ಉಳಿದ ಕುತೂಹಲ

Published:
Updated:
Prajavani

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ‘ಮಕ್ಕಳ ನೀದಿ ಮಯ್ಯಂ’ನಿಂದ ಸ್ಪರ್ಧಿಸಲಿರುವ 21 ಅಭ್ಯರ್ಥಿಗಳ ಪಟ್ಟಿಯನ್ನು ನಟ ಕಮಲ್ ಹಾಸನ್ ಬಿಡುಗಡೆ ಮಾಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಎರಡನೇ ಪಟ್ಟಿಯಲ್ಲಿ ಅವರ ಹೆಸರು ಇರಲಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಭಾನುವಾರದವರೆಗೆ ಕಾಯುವಂತೆ ಹೇಳಿದ್ದಾರೆ.

ಅವರ ಪಕ್ಷವು ತಮಿಳುನಾಡಿನ 39 ಮತ್ತು ಪುದುಚೇರಿಯ ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇವುಗಳಲ್ಲಿ ಈಗಾಗಲೇ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಉಳಿದ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಇನ್ನಷ್ಟೇ ಆಗಬೇಕಿದೆ. ಕಮಲ್ ಅವರು ದಕ್ಷಿಣ ಚೆನ್ನೈ ಅಥವಾ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಈ ಹಿಂದೆ ಹೇಳಿದ್ದವು. ಮೊದಲ ಪಟ್ಟಿಯಲ್ಲಿ ಈ ಎರಡೂ ಕ್ಷೇತ್ರಗಳು ಇಲ್ಲ.  ಪಕ್ಷವನ್ನು ಘೋಷಿಸಿದಾಗ, ಸ್ಪರ್ಧೆಗೆ ಇಳಿಯಲು ನಾನು ಸಿದ್ಧ ಎಂದು ಅವರು ಹೇಳಿದ್ದರು. ಆದರೆ ಈಚೆಗೆ, ‘ಹೌದು. ಸ್ಪರ್ಧಿಸಲು ನಾನು ಬಯಸುತ್ತೇನೆ. ಆದರೆ ನನ್ನ ಪಕ್ಷದವರೇ ಈ ಬಗ್ಗೆ ನನಗೆ ಸಲಹೆ ನೀಡಬೇಕು’ ಎಂದು ಹೇಳಿದ್ದರು. 

ಹೀಗಾಗಿ ಯಾವ ಕ್ಷೇತ್ರವನ್ನು ಕಮಲ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಇನ್ನೂ ಉಳಿದಿದೆ. ಅಲ್ಲದೆ ಕಮಲ್ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯೂ ಇದೆ.

***

ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕೆಲವು ಅತ್ಯಂತ ಮುಖ್ಯವಾದ ಹೆಸರುಗಳು ಇರಲಿವೆ. ಅದನ್ನು ತಿಳಿದುಕೊಳ್ಳಲು ನೀವು ಭಾನುವಾರದವರೆಗೆ ಕಾಯಲೇಬೇಕು

- ಕಮಲ್ ಹಾಸನ್, ಮಕ್ಕಳ ನೀದಿ ಮಯ್ಯಂ ಸಂಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !