ಉಪರಾಷ್ಟ್ರಪತಿ ನಿವಾಸಕ್ಕೂ ತಪ್ಪದ ಕೋತಿ ಕಾಟ!

7

ಉಪರಾಷ್ಟ್ರಪತಿ ನಿವಾಸಕ್ಕೂ ತಪ್ಪದ ಕೋತಿ ಕಾಟ!

Published:
Updated:
ಸಂಸತ್‌ ಹೊರಗಿನ ವಿದ್ಯುತ್‌ ದೀಪದ ಗೋಪುರದ ಮೇಲೆ ಕೋತಿಗಳ ಹಾವಳಿ

ನವದೆಹಲಿ: ಕೋತಿಗಳ ಕಾಟ ಎಲ್ಲಿಲ್ಲ? ದೇಶದ ರಾಜಧಾನಿ ದೆಹಲಿಯ ಲುಟೆನ್ಸ್‌ನಲ್ಲೂ ಅವುಗಳ ಕಾಟ ವಿಪರೀತವಾಗಿದೆ. ‘ಮಂಗನ ಚೇಷ್ಟೆ’ಯಿಂದ ಈಗ ಉಪರಾಷ್ಟ್ರಪತಿಯವರ ಅಧಿಕೃತ ನಿವಾಸ ಸಹ ಮುಕ್ತವಾಗಿಲ್ಲ.

ಈ ವಿಷಯ ಮಂಗಳವಾರ ಸಂಸತ್‌ನಲ್ಲಿ ಚರ್ಚೆಯ ಕೇಂದ್ರ ವಿಷಯವಾಗಿ ಗಮನ ಸೆಳೆಯಿತು. ರಾಜ್ಯಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳದ ಸಂಸದ ರಾಮ್‌ ಕುಮಾರ್‌ ಕಶ್ಯಪ್‌ ಶೂನ್ಯ ವೇಳೆಯಲ್ಲಿ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರು. ಕೋತಿಗಳು ದಾಳಿ ಮಾಡಿದ್ದರಿಂದ ಸಮಿತಿ ಸಭೆಗೆ ಒಮ್ಮೆ ತಡವಾಗಿ ಹೋಗಿದ್ದೆ ಎಂದು ನೆನಪಿಸಿಕೊಂಡರು.

ಆಗ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು ಉಪರಾಷ್ಟ್ರಪತಿಯವರ ಅಧಿಕೃತ ನಿವಾಸವೂ ಕೋತಿಗಳ ಕಾಟಕ್ಕೆ ತುತ್ತಾಗಿದೆ ಎನ್ನುವ ಸಂಗತಿ ಬಹಿರಂಗಪಡಿಸಿದರು. ‘ಸದ್ಯ ಸಭೆಯಲ್ಲಿ ಮೇನಕಾ ಗಾಂಧಿ ಇಲ್ಲ’ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಮೇನಕಾ ಗಾಂಧಿಯವರು ಪ್ರಾಣಿಗಳ ಹಕ್ಕುಗಳ ಬಗ್ಗೆ ಹೋರಾಟ ನಡೆಸುವ ಕಾರ್ಯಕರ್ತೆಯೂ ಆಗಿದ್ದಾರೆ. ಹಾಗಾಗಿ ನಾಯ್ಡು ಈ ಮಾತು ಹೇಳಿದರು.

ಕೋತಿಗಳ ಉಪಟಳದಿಂದ ಪಾರು ಮಾಡಲು ಏನಾದರೂ ಪರಿಹಾರ ಹುಡುಕುವಂತೆಯೂ ನಾಯ್ಡು ಅವರು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿಜಯ್‌ ಗೋಯಲ್‌ ಅವರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !