ಎಎಪಿ, ಶಿವಸೇನಾಗಿಂತ ಕಾಂಗ್ರೆಸ್‌ ದೇಣಿಗೆ ಕಡಿಮೆ: ಮೊದಲ ಸ್ಥಾನದಲ್ಲಿ ಬಿಜೆಪಿ

7

ಎಎಪಿ, ಶಿವಸೇನಾಗಿಂತ ಕಾಂಗ್ರೆಸ್‌ ದೇಣಿಗೆ ಕಡಿಮೆ: ಮೊದಲ ಸ್ಥಾನದಲ್ಲಿ ಬಿಜೆಪಿ

Published:
Updated:

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ಶಿವಸೇನಾ ಮತ್ತು ಆಮ್ ಆದ್ಮಿ (ಎಎಪಿ) ಪಕ್ಷಗಳು ಪಡೆದಿರಿವ ದೇಣಿಗೆಗಿಂತ  ಕಾಂಗ್ರೆಸ್‌ ದೇಣಿಗೆ ಕಡಿಮೆಯಾಗಿದ್ದು, ಅತಿ ಹೆಚ್ಚು ದೇಣಿಗೆ ಸ್ವೀಕರಿಸಿರುವ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. 

ಕಳೆದ ವರ್ಷ ಕಾಂಗ್ರೆಸ್ ₹42 ಕೋಟಿ ದೇಣಿಗೆ ಸಂಗ್ರಹಿಸಿದ್ದರೆ, ಶಿವಸೇನಾ ಮತ್ತು ಎಎಪಿ ಪಕ್ಷಗಳ ದೇಣಿಗೆ ₹51 ಕೋಟಿಯಾಗಿದೆ. 

ಚುನಾವಣೆ ಹಾಗೂ ರಾಜಕೀಯ ಪಕ್ಷಗಳ ಕಾವಲು ನಾಯಿ ಎಂದೇ ಜನಪ್ರಿಯವಾಗಿರುವ ಆಸೋಶಿಯೇಶನ್ ಆಫ್‌ ಡೆಮಾಕ್ರಟಿಕ್‌ ರೀಫಾರ್ಮ್ಸ್‌ ಸಂಸ್ಥೆ 2016–17ನೇ ಸಾಲಿನಲ್ಲಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ 31 ಪ್ರಾದೇಶಿಕ ಪಕ್ಷಗಳು ಪಡೆದಿರುವ ದೇಣಿಗೆ ಮಾಹಿತಿಯನ್ನು ಪ್ರಕಟಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದಕೊಂಡ ಮೇಲೆ ದೇಣಿಗೆ ಪಡೆಯುವುದರಲ್ಲಿ ಇಳಿಕೆಯಾಗಿದೆ.  ಕಳೆದ 4 ವರ್ಷಗಳಲ್ಲಿ ಶಿವಸೇನಾ ಮತ್ತು ಎಎಪಿ ಪಕ್ಷಗಳು ಪಡೆದಿರುವ ದೇಣಿಗೆಗಿಂತ ಕಾಂಗ್ರೆಸ್ ಕಡಿಮೆ ದೇಣಿಗೆ ಪಡೆದಿದೆ.  

2016–17ರಲ್ಲಿ ಬಿಜೆಪಿ ₹532 ಕೋಟಿ, ಕಾಂಗ್ರೆಸ್‌  ₹42 ಕೋಟಿ, ಶಿವಸೇನಾ ₹26 ಕೋಟಿ, ಎಎಪಿ ₹25 ಕೋಟಿ ಮತ್ತು ಶಿರೋಮಣಿ ಅಕಾಲಿದಳ ‍ಪಕ್ಷ ₹15 ಕೋಟಿ ದೇಣಿಗೆಯನ್ನು ಸ್ವೀಕರಿಸಿವೆ. 

ಎಡಿಆರ್‌ ಸಂಸ್ಥೆ 2002ರಿಂದ ರಾಜಕೀಯ ಪಕ್ಷಣಗಳ ದೇಣಿಗೆ ಸ್ವೀಕಾರದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ. 2004–05ರ ಅವಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ದೇಣಿಗೆ ಸಂಗ್ರಹ  ಹೆಚ್ಚು ಕಡಿಮೆ ಸಮನಾಗಿತ್ತು. ಯುಪಿಎ–1 ಮತ್ತು ಯುಪಿಎ–2ನೇ ಅವಧಿಯಲ್ಲಿ ಬಿಜೆಪಿಯ ಪಡೆದ ದೇಣಿಗೆಯ ಎರಡರಷ್ಟನ್ನು ಕಾಂಗ್ರೆಸ್ ಪಕ್ಷ ಪಡೆದಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 3 ವರ್ಷಗಳಲ್ಲಿ ಹೆಚ್ಚಿನ ದೇಣಿಗೆಯನ್ನು ಪಡೆದಿದೆ. ಅದು ಕಾಂಗ್ರೆಸ್ ಪಡೆದ ದೇಣಿಗೆಗಿಂತ 5 ಪಟ್ಟು ಹೆಚ್ಚಾಗಿದೆ. 

2018ರಲ್ಲಿ ಬ್ಲೂಂಬರ್ಗ್‌ ಮಾಡಿರುವ ವರದಿಯಂತೆ ಕಾಂಗ್ರೆಸ್‌ ಪಕ್ಷ ರಾಜ್ಯಗಳ ಪ್ರಾದೇಶಿಕ ಕಚೇರಿಗಳಿಗೆ ನೀಡುತ್ತಿದ್ದ ಹಣವನ್ನು ನಿಲ್ಲಿಸಿದೆ. 2019ರ ಲೋಕಸಭಾ ಚುನಾವನೆಗಾಗಿ ಕಾಂಗ್ರೆಸ್‌ ಪಕ್ಷ  ಹೆಚ್ಚಿನ ದೇಣಿಗೆ ಸಂಗ್ರಹಿಸುವ ಬಗ್ಗೆ ಯೋಜನೆ ರೂಪಿಸಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !