‘ಪತ್ನಿಯೊಂದಿಗೆ ರೋಹಿತ್‌ಗೆ ಸೌಹಾರ್ದ ಸಂಬಂಧ ಇರಲಿಲ್ಲ’

ಭಾನುವಾರ, ಮೇ 26, 2019
32 °C
ತಾಯಿ ಉಜ್ವಲಾ ಹೇಳಿಕೆ

‘ಪತ್ನಿಯೊಂದಿಗೆ ರೋಹಿತ್‌ಗೆ ಸೌಹಾರ್ದ ಸಂಬಂಧ ಇರಲಿಲ್ಲ’

Published:
Updated:

ನವದೆಹಲಿ: ‘ಪುತ್ರ ರೋಹಿತ್‌ ಶೇಖರ್ ಹಾಗೂ ಪತ್ನಿ ನಡುವೆ ಸೌಹಾರ್ದ ಸಂಬಂಧ ಇರಲಿಲ್ಲ. ರಾಜಕೀಯದಲ್ಲೂ ನಿರೀಕ್ಷಿತ ಯಶಸ್ಸು ಸಿಗದ ಕಾರಣ ಆತ ತುಂಬಾ ನೊಂದುಕೊಂಡಿದ್ದ’ ಎಂದು ಉತ್ತರಾಖಂಡದ ಮಾಜಿ ಸಿ.ಎಂ ಎನ್‌.ಡಿ. ತಿವಾರಿ ಪತ್ನಿ ಉಜ್ವಲಾ ಹೇಳಿದ್ದಾರೆ.

‘ರೋಹಿತ್‌- ಅಪೂರ್ವ ಅವರದು ಪ್ರೇಮ ವಿವಾಹ. ಆದರೆ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ’ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸೊಸೆಯನ್ನು ನಂಬಿದ್ದೆ. ಹೀಗಾಗಿಯೇ ರೋಹಿತ್‌ ಮಂಗಳವಾರ ಸಂಜೆ 4 ಗಂಟೆವರೆಗೆ ಮಲಗಿದ್ದರೂ ಯಾಕೆ ಎಬ್ಬಿಸಲಿಲ್ಲ ಎಂದು ಪ್ರಶ್ನಿಸಲಿಲ್ಲ. ನನ್ನ ಪುತ್ರನನ್ನು ಕೊಲೆ ಮಾಡಲಾಗಿದೆ ಎಂಬುದನ್ನು ಕೇಳಿ ನನಗೆ ಆಘಾತವಾಗಿದೆ’ ಎಂದರು.

ಕೊಲೆ ಪ್ರಕರಣ ದಾಖಲು: ರೋಹಿತ್‌ ಅವರನ್ನು ಮ್ಯಾಕ್ಸ್‌ ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದರು. ಇದರಿಂದಾಗಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿತ್ತು. ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ನಂತರ ಬಳಿಕ ಕೊಲೆ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !