ಬಿಸಿಲ ಝಳಕ್ಕೆ ಮೂವರ ಬಲಿ

ಸೋಮವಾರ, ಏಪ್ರಿಲ್ 22, 2019
29 °C

ಬಿಸಿಲ ಝಳಕ್ಕೆ ಮೂವರ ಬಲಿ

Published:
Updated:

ತಿರುವನಂತಪುರ: ಕೇರಳದ ವಿವಿಧೆಡೆಗಳಲ್ಲಿ  ತೀವ್ರ ಬಿಸಿಲ ಝಳಕ್ಕೆ ಮೂರು ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದ 14 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ತಾಪಮಾನವು ಎರಡರಿಂದ ಮೂರು ಡಿಗ್ರಿವರೆಗೆ ಏರಿಕೆಯಾಗಲಿದೆ ಎಂದು ಕೇರಳ ವಿಪತ್ತು ನಿರ್ವಹಣಾ ಮಂಡಳಿ, ಮಾರ್ಚ್‌ 26ರಂದು ಎಚ್ಚರಿಕೆ ನೀಡಿತ್ತು. ತಿರುವನಂತಪುರ, ಕಣ್ಣೂರು ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ‍್ಪಿರುವ ಬಗ್ಗೆ ವರದಿಯಾಗಿದೆ.

‘ಬಿಸಿಲ ಝಳದಿಂದಲೇ ಮೂವರು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ನೈಜ ಕಾರಣ ಪತ್ತೆಯಾಗಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !