ಶುಕ್ರವಾರ, ಆಗಸ್ಟ್ 6, 2021
27 °C

‘ಮಕ್ಕಳನ್ನು ಸೇನೆಗೆ ಸೇರಿಸುವೆ: ಹುತಾತ್ಮ ಯೋಧ ಸುನಿಲ್‌ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ‘ನನ್ನಿಬ್ಬರು ಪುತ್ರರನ್ನು ಸೇನೆಗೆ ಸೇರಿಸುತ್ತೇನೆ. ಅವರು ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ’ ಇದು ಹುತಾತ್ಮ ಯೋಧ ಸುನಿಲ್‌ ಅವರ ಪತ್ನಿಯ ಮಾತು. 

ಭಾರತ–ಚೀನಾ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಅಂತ್ಯಕ್ರಿಯೆಯನ್ನು ಗುರುವಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. 

ಈ ವೇಳೆ ಮಾತನಾಡಿದ ಯೋಧ ಸುನಿಲ್‌ ಪತ್ನಿ ಪ್ರೀತಿ, ‘ಪುತ್ರರಾದ ಆಯುಷ್‌ (11) ಮತ್ತು ವಿರಾಟ್‌ (5) ದೊಡ್ಡವರಾಗಿ ಸೇನೆಗೆ ಸೇರುತ್ತಾರೆ. ಚೀನಾದೊಂದಿಗೆ ಅವರು ಹೋರಾಡುತ್ತಾರೆ’ ಎಂಬ ಭರವಸೆಯ ನುಡಿಗನ್ನಾಡಿದ್ದಾರೆ. 

ಇದೇ ರೀತಿಯ ಅಭಿಪ್ರಾಯವನ್ನು ಯೋಧ ಕುಂದನ್‌ ಕುಮಾರ್‌ ಅವರ ತಂದೆ ವ್ಯಕ್ತಪಡಿಸಿದ್ದು, ‘ನನ್ನ ಮಗನ ಬಗ್ಗೆ ಅತೀವ ಹೆಮ್ಮೆಯಿದೆ. ಮಗನ ಸಾಧನೆಯ ಬಗ್ಗೆ ಮೊಮ್ಮಕಳಿಗೆ ತಿಳಿಸುತ್ತೇನೆ. ಅವರು ದೊಡ್ಡವರಾದ ಮೇಲೆ ಮಗನ ಹಾದಿಯನ್ನೇ ಅನುಸರಿಸಿ, ಸೇನೆಗೆ ಸೇರುವಂತೆ ಹೇಳುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು