ಶಾಲಾ ಚಾವಣಿ ಕಳಚಿ ಬೀಳುತ್ತಿದೆ

7
ದುಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅಳಲು ಕೇಳೋರಿಲ್ಲ

ಶಾಲಾ ಚಾವಣಿ ಕಳಚಿ ಬೀಳುತ್ತಿದೆ

Published:
Updated:
Deccan Herald

ಶನಿವಾರಸಂತೆ (ಕೊಡಗು ಜಿಲ್ಲೆ): ದುಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಚಾವಣಿ ಕುಸಿಯುವ ಹಂತ ತಲುಪಿವೆ. ರೀಪು ಗೆದ್ದಲು ಹಿಡಿದು ತುಂಡಾಗಿ ಬೀಳುತ್ತಿವೆ. ಹೆಂಚುಗಳು ಚೂರಾಗಿ ಬೀಳುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಐದು ಬಾರಿ ಗೆದ್ದು ವಿಧಾನಸಭೆ ಪ್ರವೇಶಿಸಿರುವ ಬಿಜೆಪಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರ ಕ್ಷೇತ್ರದ ಶಾಲೆಯ ದುಸ್ಥಿತಿಯಿದು.

ಶಾಲೆಯಲ್ಲಿ ರಂಗಮಂಟಪ ಸೇರಿದಂತೆ 9 ಕೊಠಡಿಗಳಿವೆ. ಎರಡು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ವಿದ್ಯಾರ್ಥಿಗಳು ಓಡಾಡುವಾಗ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಸುಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ 1ರಿಂದ 7ನೇ ತರಗತಿಗೆ ಪಾಠ ಪ್ರವಚನಗಳು ನಡೆಯುತ್ತಿವೆ.

1958ರಲ್ಲಿ ಈ ಶಾಲೆಯನ್ನು ಆರಂಭಿಸಲಾಗಿದೆ. ಪ್ರಸ್ತುತ ಶಾಲೆಯಲ್ಲಿ 27 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ದುಂಡಳ್ಳಿ ಅಲ್ಲದೇ ಮಾದ್ರೆ, ಬಿಳಾಹ, ಕೂಜಗೇರಿ, ಶಿರಹ, ಕಾಜೂರು, ತೋಯಳ್ಳಿ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

ತಾತ್ಕಾಲಿಕವಾಗಿ ಎರಡೂ ಕೊಠಡಿಗಳನ್ನು ಬಂದ್‌ ಮಾಡಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.

‘ಗೆದ್ದಲು ಹಿಡಿದು ಬೀಳುವ ಸ್ಥಿತಿಯಲ್ಲಿರುವ ಕೊಠಡಿ ಚಾವಣಿ ಬಿದ್ದು ಅನಾಹುತ ಆಗುವ ಮೊದಲು ದುರಸ್ತಿ ಮಾಡಬೇಕು’ ಎಂದು ಗ್ರಾಮಸ್ಥ ತಮ್ಮೇಗೌಡ ಆಗ್ರಹಿಸುತ್ತಾರೆ.

* ದುಂಡಳ್ಳಿ, ಮಾದ್ರೆ, ಬಿಳಾಹ, ಚಿಕ್ಕಕೊಳತ್ತೂರು, ದೊಡ್ಡಕೊಳತ್ತೂರು ವ್ಯಾಪ್ತಿಯಲ್ಲಿ ವಸತಿ ಶಾಲೆ ತೆರೆಯಬೇಕು

-ಸಿ.ಜೆ.ಗಿರೀಶ್, ಅಧ್ಯಕ್ಷ, ದುಂಡಳ್ಳಿ ಗ್ರಾಮ ಪಂಚಾಯಿತಿ

* ಶಾಲಾ ಕೊಠಡಿಗಳ ಸ್ಥಿತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ವೀಕ್ಷಣೆ ಮಾಡಿದ್ದು ದುರಸ್ತಿ ಭರವಸೆ ನೀಡಿದ್ದಾರೆ

- ನಿರ್ಮಲಾ,ಸಂಪನ್ಮೂಲ ವ್ಯಕ್ತಿ, ಶನಿವಾರಸಂತೆ ಕ್ಲಸ್ಟರ್

* ಗ್ರಾಮದ ಕನ್ನಡ ಮಾಧ್ಯಮ ಶಾಲೆ ಉಳಿಯಬೇಕು. ಉತ್ತಮ ಸೌಲಭ್ಯಗಳು ದೊರೆತರೆ ಮಾತ್ರ ಪೋಷಕರು ನಿರಾಳರಾಗುತ್ತಾರೆ

-ಡಿ.ಎಲ್.ಯೋಗೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !