ಬುಧವಾರ, ಆಗಸ್ಟ್ 4, 2021
28 °C

ನೋಡಾಕ್‌ ಚೆಂದ್ ಅದಾಳು: ಸೌಂದರ್ಯ ವರ್ಣಿಸಿಕೊಂಡ ಲಕ್ಷ್ಮಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಲಕ್ಷ್ಮಿ ಒಬ್ಬಾಕಿ ಹುಚ್ಚದಾಳು. ಬರ್ತಾಳು. ಜೋರ್ ಜೋರ್ ಭಾಷ್ಣ ಮಾಡ್ತಾಳು. ನಾವು ಗೋಣ್ ಹಾಕ್ತೇವಿ. ಆಕಿಗ ವೋಟ್ ಹಾಕಿದ್ರೆ ನೋಡಾಕ್ ಒಂದಷ್ಟ್ ಚೆಂದ್ ಅದಾಳು; ನಮದೊಂದಿಷ್ಟು ಕೆಲ್ಸ ಮಾಡ್ಕೊಡ್ತಾಳು ಅಂತ ವೋಟ್ ಹಾಕ್ತೀರಿ, ಅಲ್ವಾ?’

– ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಾರ್ವಜನಿಕರನ್ನು ಪ್ರಶ್ನಿಸಿದ್ದು ಹೀಗೆ.

ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಪರವಾಗಿ ಭಾನುವಾರ ಮತಯಾಚಿಸಿದ ಅವರು, ‘ಮತದಾರರು ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಅನ್ಯಾಯಗಳ ಕುರಿತು ಯೋಚಿಸಬೇಕು’ ಎಂದು ಹೇಳಿದರು.

‘ಮೋದಿ ಸರ್ಕಾರದಲ್ಲಿ ಆರ್‌ಬಿಐ ಗವರ್ನರ್‌ ರಾಜೀನಾಮೆ ಕೊಡುತ್ತಾರೆ. 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ನಿಮಗೆಲ್ಲ ತಿಳಿಯೋದಿಲ್ಲ; ನಾವೆಲ್ಲಾ ಹಳ್ಳಿ ಜನ. ಎರಡ್ಹೊತ್ತು ಊಟ ಸಿಕ್ಕರೆ ಸಾಕು ಎಂದು ಸುಮ್ಮನಿರಬಾರದು. ಕಾಂಗ್ರೆಸ್‌ನ ಕೊಡುಗೆಗಳೇನು ಎನ್ನುವುದನ್ನು ಗಂಭೀರವಾಗಿ ನೋಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು