ಸೋಮವಾರ, ನವೆಂಬರ್ 18, 2019
25 °C

ರಾಮ ಮಂದಿರ ಸಾಕ್ಷಿ ಕೇಳುವವರಿಗೆ ಹೆತ್ತವರ ಬಗ್ಗೆ ವಿಶ್ವಾಸವಿಲ್ಲ: ಸಿ.ಟಿ. ರವಿ

Published:
Updated:

ಬೆಳಗಾವಿ: ‘ಅಯೋಧ್ಯೆಯಲ್ಲಿ ರಾಮಮಂದಿರ ಇತ್ತಾ ಎಂದು ಸಾಕ್ಷಿ ಕೇಳುವವರಿಗೆ ಇತಿಹಾಸ ಪ್ರಜ್ಞೆಯಿಲ್ಲ. ಯಾರಿಗೆ ತಮ್ಮ ಬಗ್ಗೆ ಹಾಗೂ ತಮ್ಮನ್ನು ಹೆತ್ತವರ ಬಗ್ಗೆ ನಂಬಿಕೆ ಇರಲ್ಲವೋ ಅಂತವರು ಮಾತ್ರ ಪುರಾವೆ ಕೇಳುತ್ತಾರೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು. ಇದು ನಮ್ಮ ಹೋರಾಟವೂ ಹೌದು. ನಮ್ಮ ಕನಸೂ ಹೌದು’ ಎಂದು ಹೇಳಿದರು.

‘ಅಯೋಧ್ಯೆಯಲ್ಲಿ ಇದ್ದಂತಹ ಭವ್ಯ ಮಂದಿರವನ್ನು ಕೆಡವಿ, ಮಸೀದಿ ಕಟ್ಟಿಸಿದ ದಿನದಿಂದಲೂ ಹೋರಾಟ ನಡೆದಿವೆ. ಸದ್ಯ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ರಾಮಮಂದಿರ ಪರವಾಗಿ ತೀರ್ಪು ಬರುತ್ತದೆ ಎನ್ನುವ ವಿಶ್ವಾಸ ತಮಗಿದೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರು ಸಗಣಿ ಎತ್ತಿದವರು. ನಾನು ಸಗಣಿ ಎತ್ತಿದ್ದೇನೆ. ನನ್ನ ಮನಸ್ಸು ಗೋ ರಕ್ಷಣೆ ಕಡೆಯಿದೆ. ಆದರೆ ಅವರ ಮನಸ್ಸು ಗೋಹತ್ಯೆ ಮಾಡುವವರ ಪರವಿದೆ. ಸಗಣಿ ಎತ್ತುವಾಗ ಗೋವಿನ ಮೇಲೆ ಇದ್ದ ಪ್ರೀತಿ ಅಧಿಕಾರ ಸಿಕ್ಕ ಬಳಿಕ ಬದಲಾಯ್ತಾ? ಇದು ಗೋಮುಖ ವ್ಯಾಘ್ರ ಮನಸ್ಥಿತಿ ಅನಿಸುತ್ತೆ. ಅವರು ಗೋ ಮುಖ ವ್ಯಾಘ್ರ ಆಗಬಾರದು’ ಎಂದು ಛೇಡಿಸಿದರು.

ಪ್ರತಿಕ್ರಿಯಿಸಿ (+)