ಬಿಜೆಪಿಯಿಂದ ‘ಆಪರೇಷನ್ ಅರ್ಚಕ’!

7
ಬೂತ್ ವ್ಯಾಪ್ತಿಯ ದೇವಸ್ಥಾನಗಳ ಭಕ್ತರ ಮತ ಬೇಟೆಗೆ ತಂತ್ರ: ಅನ್ಯ ಪಕ್ಷದ ಕಾರ್ಯಕರ್ತರೊಂದಿಗೆ ಕುಸ್ತಿ ಬದಲು ದೋಸ್ತಿ

ಬಿಜೆಪಿಯಿಂದ ‘ಆಪರೇಷನ್ ಅರ್ಚಕ’!

Published:
Updated:

ಹುಬ್ಬಳ್ಳಿ: ದೇವರಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡುವ ಅರ್ಚಕ ಪ್ರಸಾದ ಕೈಗಿಟ್ಟ ನಂತರ ‘ಬಿಜೆಪಿಗೆ ಮತ ಹಾಕಿ, ದೇವರು ಒಳ್ಳೆಯದು ಮಾಡುತ್ತಾನೆ’ ಎಂದರೆ ಆಶ್ಚರ್ಯಪಡಬೇಡಿ!

ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಬಿಜೆಪಿ, ಮತ ಗಳಿಸುವ ಯಾವೊಂದು ಸಣ್ಣ ಅವಕಾಶವೂ ಕೈತಪ್ಪದಂತೆ ಕಾರ್ಯಸೂಚಿ ರೂಪಿಸಿದೆ. ದೇವಸ್ಥಾನದ ಅರ್ಚಕರ ಮೂಲಕ ಭಕ್ತರ ಮತ ಬೇಟೆಗೆ ಮುಂದಾಗಿದೆ.

ಮತ ಸೆಳೆಯಲು ಬಿಜೆಪಿ ರೂಪಿಸಿರುವ 23 ಕಾರ್ಯಸೂಚಿಗಳಲ್ಲಿ ‘ಆಪರೇಷನ್ ಅರ್ಚಕ’ ಕೂಡ ಒಂದಾಗಿದೆ. ಸ್ಥಳೀಯ ಮುಖಂಡರು, ಬೂತ್ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿನ ಅರ್ಚಕರ ಮನವೊಲಿಸಬೇಕು. ಅವರ ಮೂಲಕ ಭಕ್ತರ ಮೇಲೆ ಪ್ರಭಾವ ಬೀರಬೇಕು ಎನ್ನುವ ಮೌಖಿಕ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಧಾರ್ಮಿಕ ಸ್ಥಳಗಳ ವ್ಯಾಪ್ತಿಯಲ್ಲಿ ಮತ ಕೇಳುವುದು ಚುನಾವಣಾ ನಿಯಮದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಅರ್ಚಕರ ಮೂಲಕವೇ ಮೌನವಾಗಿ ಮತದಾರರನ್ನು ಸೆಳೆಯುವುದು ಪಕ್ಷದ ಉದ್ದೇಶವಾಗಿದೆ ಎನ್ನಲಾಗಿದೆ. 

ಬೇರೆ– ಬೇರೆ ಪಕ್ಷಗಳ ಕಾರ್ಯಕರ್ತರು, ಮತದಾರರ ಜತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಅವರನ್ನು ಸಹ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಬೇಕು ಎಂಬ ಸೂಚನೆಯನ್ನು ಮುಖಂಡರಿಗೆ ನೀಡಲಾಗಿದೆ. ಅನ್ಯ ಪಕ್ಷದ ಕಾರ್ಯಕರ್ತರ ಜೊತೆಗೆ ಪೈಪೋಟಿ ನಡೆಸುವುದು ಸಾಮಾನ್ಯ, ಆದರೆ ರಣತಂತ್ರದ ಭಾಗವಾಗಿ ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳಬೇಕು ಎಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸೊಸೈಟಿ, ಸಹಕಾರಿ ಬ್ಯಾಂಕುಗಳ ನಿರ್ದೇಶಕರನ್ನು ಸಂಪರ್ಕಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಪ್ರತಿ ಬೂತ್‌ನಲ್ಲಿ ಪರಿಶಿಷ್ಟ ಜಾತಿ– ಪಂಗಡದ 10 ಹಾಗೂ ಹಿಂದುಳಿದ ವರ್ಗಗಳ 10 ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಸದಸ್ಯರೊಂದಿಗೂ ಸಂಪರ್ಕ ಸಾಧಿಸಬೇಕು ಎನ್ನುವ ಪ್ರಮುಖ ಅಂಶಗಳು ಸಹ ಕಾರ್ಯಸೂಚಿಯಲ್ಲಿವೆ.

**

ಬೂತ್ ವ್ಯಾಪ್ತಿಯಲ್ಲಿ ಕನಿಷ್ಠ 5 ಸ್ಥಳಗಳಲ್ಲಿ ಕಮಲ ಚಿಹ್ನೆ ಚಿತ್ರ

ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದವರು– ಸೋತವರ ಪಕ್ಷ ಸೇರ್ಪಡೆ

ಸಾಮಾಜಿಕ ಸಂರಚನೆಗೆ ಅನುಗುಣವಾಗಿ ಬೂತ್ ಸಮಿತಿ ರಚನೆ

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !