ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಾನ ಹೆಚ್ಚಿಸಿಕೊಳ್ಳಲು ನಿರ್ಧಾರ: ಗ್ರಾಹಕರ ಖುಷಿ ಕಸಿದ ಮದ್ಯದ ದರ ಹೆಚ್ಚಳ!

Last Updated 7 ಮೇ 2020, 1:32 IST
ಅಕ್ಷರ ಗಾತ್ರ

ಹೈದರಾಬಾದ್‌/ಚಂಡಿಗಡ/ಲಖನೌ/ಚೆನ್ನೈ: ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟ ಬುಧವಾರ ಆರಂಭವಾಗಿದೆ. ಆದರೆ, ಮಾರಾಟ ಆರಂಭದ ದಿನದಿಂದಲೇ ಅನ್ವಯವಾಗುವಂತೆ ಮದ್ಯದ ದರದಲ್ಲಿನ ಹೆಚ್ಚಳ ಗ್ರಾಹಕರಿಗೆ ಆಘಾತ ತಂದಿದೆ.

ತೆಲಂಗಾಣದಲ್ಲಿ ಮದ್ಯದ ದರವನ್ನು ಸರ್ಕಾರ ಶೇ 16ರಷ್ಟು ಹೆಚ್ಚಿಸಿದೆ. ಇದಕ್ಕೆ ಕೆಲವರಿಂದ ಟೀಕೆಗಳು ಬಂದಿವೆ. ಇನ್ನೂ ಕೆಲವರು ಬೆಲೆ ಏರಿದರೂ ಚಿಂತೆಯಿಲ್ಲ ಎಂದಿದ್ದಾರೆ.

‘ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ದರ ಎಷ್ಟೇ ಇರಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಸಾಕಾಗುವಷ್ಟು ಮದ್ಯ ಖರೀದಿಸುತ್ತೇನೆ’ ಎಂಬುದು ಹೈದರಾಬಾದ್‌ನ ಗ್ರಾಹಕರೊಬ್ಬರ ಖಚಿತ ನುಡಿಯಾಗಿತ್ತು.

ಇನ್ನು, ಹರಿಯಾಣ ಸರ್ಕಾರ ಮದ್ಯ ಮಾರಾಟದ ಮೇಲೆ ‘ಕೋವಿಡ್‌ ತೆರಿಗೆ’ಯನ್ನು ವಿಧಿಸಿದೆ. ದೇಶೀಯ ಮದ್ಯದ ಮೇಲೆ ₹ 5 ಹಾಗೂ ಐಎಂಎಫ್‌ಎಲ್‌ ಮೇಲೆ ₹ 20 ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ಮದ್ಯವನ್ನು ವರ್ಗೀಕರಿಸಿರುವ ಉತ್ತರ ಪ್ರದೇಶ ಸರ್ಕಾರ, ಪ್ರಮಾಣ ಹಾಗೂ ವರ್ಗವಾರು ದರ ಹೆಚ್ಚಳ ಮಾಡಿದೆ. ₹ 5ರಿಂದ ₹ 400 ವರೆಗೆ ದರ ಹೆಚ್ಚಳದ ಹೊರೆ ಗ್ರಾಹಕರ ಮೇಲೆ ಬಿದ್ದಿದೆ. ಈ ಕ್ರಮದಿಂದ ₹ 2,350 ಕೋಟಿ ಆದಾಯ ಬರಲಿದೆ ಎಂದು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅಂದಾಜಿಸಿದ್ದಾರೆ.

ಮೇ 7ರಿಂದ ಅನ್ವಯವಾಗುವಂತೆ ಮದ್ಯದ ದರವನ್ನು ಗರಿಷ್ಠ ₹ 20ರಷ್ಟು ಹೆಚ್ಚಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಐಎಂಎಫ್‌ಎಲ್‌ ಮೇಲಿನ ಅಬಕಾರಿ ಸುಂಕವನ್ನು ಶೇ 15ರಷ್ಟು ಹೆಚ್ಚಳ ಮಾಡಿದ್ದರಿಂದ ಮದ್ಯ ಇಲ್ಲಿ ದುಬಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT