ಗಿರೀಶ್‌ ಕಾರ್ನಾಡ್‌ ವಿರುದ್ಧ ಹೈಕೋರ್ಟ್‌ಗೆ ರಿಟ್‌

7

ಗಿರೀಶ್‌ ಕಾರ್ನಾಡ್‌ ವಿರುದ್ಧ ಹೈಕೋರ್ಟ್‌ಗೆ ರಿಟ್‌

Published:
Updated:

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ಹೈಕೋರ್ಟ್‌ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

‘ನಿಷೇಧಿತ ಮಾವೊವಾದಿ ನಕ್ಸಲ್ ಸಂಘಟನೆ ಮುಖಂಡರ ಜೊತೆ ಕಾರ್ನಾಡ್‌ ಅವರಿಗೆ ನಿಕಟ ಸಂಪರ್ಕವಿದೆ. ಹಾಗಾಗಿಯೇ ಅವರು ಗೌರಿ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ‘ಮಿ ಟೂ ಅರ್ಬನ್ ನಕ್ಸಲ್’ ಎಂಬ ಭಿತ್ತಿಪತ್ರವನ್ನು ಕೊರಳಿಗೆ ನೇತುಹಾಕಿಕೊಂಡಿದ್ದರು.  ಆದ್ದರಿಂದ ಕಾರ್ನಾಡ್ ನಕ್ಸಲ್ ಜೊತೆಗೆ ಹೊಂದಿರುವ ನಂಟಿನ ಬಗ್ಗೆ ತನಿಖೆ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !