ಫೋಟೊದ ಮೂಲ ಹುಡುಕುವುದು ಹೇಗೆ?

7

ಫೋಟೊದ ಮೂಲ ಹುಡುಕುವುದು ಹೇಗೆ?

Published:
Updated:

ಯಾರೋ ಕ್ಲಿಕ್ಕಿಸಿದ ಫೋಟೊವನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಲೈಕ್ ಕಾಮೆಂಟ್ ಗಿಟ್ಟಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಗೂಗಲ್, ಬ್ಲಾಗ್ ಅಥವಾ ಇನ್ಯಾವುದೇ ಸಾಮಾಜಿಕತಾಣದಲ್ಲಿ ಅಪ್‌ಲೋಡ್‌ ಮಾಡಿದ ಫೋಟೊವನ್ನು ಡೌನ್‌ಲೋಡ್‌ ಮಾಡಿಕೊಂಡು ಎಲ್ಲೆಂದರಲ್ಲಿ ಬಳಸಿ ಕಾಪಿರೈಟ್ ಉಲ್ಲಂಘನೆ ಮಾಡುವುದು ನಡೆಯುತ್ತಲೇ ಇರುತ್ತದೆ. ಯಾರಾದರೂ ಈ ರೀತಿ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದರೆ ಅದರ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂಬುದನ್ನು ನೋಡೋಣ.

ಗೂಗಲ್ ರಿವರ್ಸ್ ಇಮೇಜ್ ಸರ್ಚ್

https://reverse.photos/ ಈ ಲಿಂಕ್ ಓಪನ್ ಮಾಡಿ. ಅಪ್‌ಲೋಡ್‌ ಪಿಕ್ಚರ್ ಎಂಬ ಆಯ್ಕೆ ಕಾಣಿಸುತ್ತದೆ. ಯಾವ ಫೋಟೊದ ಮೂಲವನ್ನು ಹುಡುಕಬೇಕೆಂದಿದ್ದೀರೋ ಆ ಫೋಟೊವನ್ನು ಅಲ್ಲಿ ಅಪ್‌ಲೋಡ್‌ ಮಾಡಿ. ನೀವು ಇಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೊ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಗೂಗಲ್ ತೋರಿಸುತ್ತದೆ.

ಒಂದು ವೇಳೆ ಸಾಮಾಜಿಕ ತಾಣದಲ್ಲಿ ಯಾರೋ ಒಬ್ಬ ವ್ಯಕ್ತಿ ಪ್ರೊಫೈಲ್ ಫೋಟೊ ಆಗಿಯೋ ಅಥವಾ ತಮ್ಮ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ಚಿತ್ರ ಎಲ್ಲಿಂದ ಡೌನ್‌ಲೋಡ್‌ ಮಾಡಲಾಗಿದೆ ಎಂಬುದನ್ನು ತಿಳಿಯಲು ಗೂಗಲ್ ಇಮೇಜ್ ಸರ್ಚ್‌ಗೆ (https://images.google.com/) ಹೋಗಿ. ಸರ್ಚ್ ಬಾರ್‌ನಲ್ಲಿ ಚಿಕ್ಕದಾಗಿ ಕ್ಯಾಮೆರಾ ಐಕಾನ್ ಕಾಣುತ್ತದೆ. ಅಲ್ಲಿಯೇ Paste the URL of the image ಮತ್ತು Upload Image ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಇಲ್ಲಿ URL ಪೇಸ್ಟ್ ಮಾಡಿ ಇಲ್ಲವೇ ಇಮೇಜ್ ಅಪ್‌ಲೋಡ್‌ ಮಾಡಿ ಸರ್ಚ್ ಕೊಟ್ಟರೆ ನೀವು ಅಪ್‌ಲೋಡ್‌ ಮಾಡಿ ಹುಡುಕಿದ ಫೋಟೊ ಯಾವ ವೆಬ್‌ಸೈಟ್‌ನಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯಬಹುದು.

TinEye

https://www.tineye.com ಎಂಬುದು ರಿವರ್ಸ್ ಇಮೇಜ್ ಸರ್ಚ್ ಇಂಜಿನ್ ಆಗಿದ್ದು, ಇಲ್ಲಿ ಫೋಟೊದ URL ಐಡಿಯನ್ನು ಕಾಪಿ ಪೇಸ್ಟ್ ಮಾಡಿ ಫೋಟೊ ಯಾವೆಲ್ಲಾ ವೆಬ್‌ಸೈಟ್‌ಗಳಲ್ಲಿ ಬಳಕೆಯಾಗಿದೆ ಎಂಬುದನ್ನು ನೋಡಬಹುದು.

URL ತಿಳಿಯುವುದು ಹೇಗೆ?

ಡೌನ್‌ಲೋಡ್‌ ಮಾಡಿದ ಫೋಟೊದ ಮೇಲೆ ರೈಟ್ ಕ್ಲಿಕ್ ಮಾಡಿದರೆ Click Copy image address ಎಂದು ತೋರಿಸುತ್ತದೆ.

ಇದು ಫೋಟೊದ URL ಆಗಿರುತ್ತದೆ. ನೀವು ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ ಮಾತ್ರ ಫೋಟೊದಲ್ಲಿ ಈ ರೀತಿಯ ಆಯ್ಕೆ ಕಾಣುತ್ತದೆ. ನೀವು ಬಳಸುವ ಬ್ರೌಸರ್ ಫೈರ್ ಫಾಕ್ಸ್ ಆಗಿದ್ದರೆ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿದರೆ Click Copy Image Location, Microsoft Edge ಬ್ರೌಸರ್ ಆಗಿದ್ದರೆ Click Copy link ಎಂಬ ಆಯ್ಕೆಯು ಮೂಲಕ ಇಮೇಜ್ URL ಪಡೆಯಬಹುದು.

– ರಶ್ಮಿ ಕೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !