ಬಂಗಾಳದಲ್ಲಿ ಪಾಕ್ ಸ್ವಾತಂತ್ರ್ಯದಿನ ಆಚರಿಸಲಾಗುತ್ತಿದೆ ಎಂಬುದು ಸುಳ್ಳು ಸುದ್ದಿ

7

ಬಂಗಾಳದಲ್ಲಿ ಪಾಕ್ ಸ್ವಾತಂತ್ರ್ಯದಿನ ಆಚರಿಸಲಾಗುತ್ತಿದೆ ಎಂಬುದು ಸುಳ್ಳು ಸುದ್ದಿ

Published:
Updated:

ಬೆಂಗಳೂರು:  ದಯಮಾಡಿ ಈ ವಿಷಯದತ್ತ ಗಮನಹರಿಸಿ.ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ರಾಜಕೀಯ ಇದು. ಜಷನ್ ಎ ಆಜಾದಿ ಎಂದರೆ ಅರ್ಥ ಏನು? ಅಲ್ಲಿ ಆಗಸ್ಟ್ 14 ಎಂಬ ದಿನಾಂಕವನ್ನು ಬರೆಯಲಾಗಿದೆ. ಅವರು ಪಾಕಿಸ್ತಾನಿಗಳಾ? ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹೇಶ್ ವಿಕ್ರಂ ಹೆಗಡೆ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನಲ್ಲಿರುವ ಚಿತ್ರದ ಬಗ್ಗೆ ಆಲ್ಟ್ ನ್ಯೂಸ್ ಬೆಳಕು ಚೆಲ್ಲಿದೆ.

ಪಶ್ಚಿಮ ಬಂಗಾಳದ ಟಿಟಾಗಢ್ ಎಂಬಲ್ಲಿ ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯದಿನವನ್ನು ಆಚರಿಸಲಾಗುತ್ತಿದೆ ಎಂದು ಮಹೇಶ್ ವಿಕ್ರಂ ಹೆಗಡೆ ವಾದಿಸುತ್ತಿದ್ದಾರೆ.

ಯಾರು ಈ ಮಹೇಶ್ ವಿಕ್ರಂ ಹೆಗಡೆ? 
ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವ ಬಲಪಂಥೀಯ ತಾಣವಾದ ಪೋಸ್ಟ್ ಕಾರ್ಡ್ ನ್ಯೂಸ್‍ನ ಸಹ ಸಂಸ್ಥಾಪಕರಾಗಿದ್ದಾರೆ ಇವರು.

ಏನಿದು ವಿಷಯ?
ಪ್ರತಿ ವರ್ಷವೂ ಆಗಸ್ಟ್ 14ರಂದು ಪಶ್ಚಿಮ ಬಂಗಾಳದಲ್ಲಿ ಮುಷಾಯರಾ (ಉರ್ದು ಕವಿಗೋಷ್ಠಿ) ಮತ್ತು ಕವಿ ಗೋಷ್ಠಿಗಳು ನಡೆಯುತ್ತವೆ. ಈ ಸಮಾರಂಭದ ಚಿತ್ರವನ್ನು ಟ್ವೀಟ್ ಮಾಡಿ ಮಹೇಶ್ ಅವರು ದ್ವೇಷದ ಕಿಡಿ ಕಾರಿದ್ದಾರೆ.


 ಕಳೆದ ವರ್ಷ ಆಗಸ್ಟ್ 14ರಂದು ನಡೆದ ಕವಿ ಗೋಷ್ಠಿಯ ಚಿತ್ರ ಇಲ್ಲಿದೆ.

ಅಂದಹಾಗೆ ತಮ್ಮ ಟ್ವೀಟ್ ನಲ್ಲಿ ಮಹೇಶ್ ಅವರು ಇವರೇನು ಪಾಕಿಸ್ತಾನಿಗಳಾ? ಎಂದು ಕೇಳಿದ್ದಾರೆ. ಅಲ್ಲಿರುವುದು ಭಾರತದ ಧ್ವಜ. ಮಹೇಶ್ ಅವರಿಗೆ ಆ ಧ್ವಜದ ಗುರುತು ಸಿಗಲಿಲ್ಲವೇ?. ಕಾರ್ಯಕ್ರಮದ  ಹೆಸರು ಜಷನ್ ಎ ಆಜಾದಿ, ಇದರ ಅರ್ಥ ಸ್ವಾತಂತ್ತ್ಯದ ಸಂಭ್ರಮ!

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಪಶ್ಚಿಮ ಬಂಗಾಳದ ಅಲ್ಪ ಸಂಖ್ಯಾತರನ್ನು ಟಾರ್ಗೆಟ್ ಮಾಡಿ ಮಹೇಶ್ ಈ ಟ್ವೀಟ್ ಮಾಡಿದ್ದಾರೆ.


ಆಗಸ್ಟ್ 14ರಂದೇ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ ( ಕಳೆದ  ವರ್ಷದ ಚಿತ್ರ)

ಅಂದ ಹಾಗೆ  ಭಾರತದ ರಾಷ್ಟ್ರಪತಿಯವರು ಕೂಡಾ ಆಗಸ್ಟ್ 14ರಂದೇ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ ಎಂಬ ವಿಷಯವನ್ನು ಮಹೇಶ್ ಮರೆತಂತಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಕಾರ್ಯಕ್ರಮದ ಫೋಟೊವನ್ನು ಟ್ವೀಟ್ ಮಾಡಿ ಕೆಲವು ಬಲಪಂಥೀಯರು ಮಹೇಶ್ ಅವರು ಕೇಳಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ.

ಟಿಟಾಗಢ್‍ನಲ್ಲಿ ಆಯೋಜಿಸಲಾಗುವ ಜಷನ್ ಎ ಅಜಾದಿ ಆಲ್ ಇಂಡಿಯಾ ಮುಷಾಯರಾದಲ್ಲಿ ಭಾಗವಹಿಸಲಿರುವ ಕವಿ ಇಮ್ರಾನ್ ಪ್ರತಾಪ್‍ಗಾರ್ಹಿ ಅವರ ವಿರುದ್ಧವೂ ಮಹೇಶ್ ಸೇರಿದಂತೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮದಲ್ಲಿ ಕವನ ವಾಚನ ಮಾತ್ರವಲ್ಲದೆ ಭಾರತದ ಧ್ವಜಾರೋಹಣವೂ ಇದೆ. ಈ ವರ್ಷ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಇಮ್ರಾನ್ ಅವರ ಪೋಸ್ಟ್ ನಲ್ಲಿ ಎಲ್ಲ ವಿವರಣೆಗಳು ಇವೆ.

ಇಮ್ರಾನ್ ಟ್ವೀಟ್ ನಲ್ಲಿ ಏನಿದೆ?

ಭಾರತದ ಸ್ವಾತಂತ್ರ್ಯದಿನದ ಮುನ್ನಾದಿನ ಸಂಜೆ
14 ಆಗಸ್ಟ್, 2018 , ಟಿಟಾಗಢ್, ಕೊಲ್ಕತ್ತಾ
ಈ ಕಾರ್ಯಕ್ರಮದ ಸೊಬಗು ಏನೆಂದರೆ, ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಸಾವಿರಾರು ಜನರ ಚಪ್ಪಾಳೆಯೊಂದಿಗೆ ತ್ರಿವರ್ಣ ದ್ವಜ ಹಾರಿಸಲಾಗುವುದು. ಆ ಧ್ವಜದ ಕೆಳಗೆ ನಿಂತು ರಾಷ್ಟ್ರಗೀತೆ ಹಾಡಲಾಗುವುದು. ಇದಾದ ನಂತರ ಶಾಯರಿ ಹೇಳಲಾಗುವುದು.
 

 

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !