ಫೆಮಿನಿಸ್ಟ್ ಹೇಗಿರುತ್ತಾರೆ? ಮೋದಿ ಅಭಿಮಾನಿಯ ಟ್ವೀಟ್ ವಿಶ್ಲೇಷಣೆಗೆ ರಮ್ಯಾ ಟಾಂಗ್

7

ಫೆಮಿನಿಸ್ಟ್ ಹೇಗಿರುತ್ತಾರೆ? ಮೋದಿ ಅಭಿಮಾನಿಯ ಟ್ವೀಟ್ ವಿಶ್ಲೇಷಣೆಗೆ ರಮ್ಯಾ ಟಾಂಗ್

Published:
Updated:

ಬೆಂಗಳೂರು: ಫೆಮಿನಿಸ್ಟ್ ನ ಲಕ್ಷಣಗಳು ಹೀಗೆ ಇರುತ್ತವೆ- ಆಕೆ ಕುರೂಪಿ, ಕೋಪಿಷ್ಠೆ, ಪೆದ್ದು, ಆಕೆ ಸಿಗರೇಟ್ ಸೇದುವವಳು, ಹಾಸ್ಯಪ್ರಜ್ಞೆ ಇಲ್ಲ, ಆಕೆಯ ದೇಹದ ಮೇಲೆ ಅನಗತ್ಯವಾದ ಟ್ಯಾಟೂ ಇರುತ್ತದೆ. ಇದಲ್ಲದೆ ಅವರಲ್ಲಿರುವ ಸಾಮಾನ್ಯ ಲಕ್ಷಣ ಎಂದರೆ ಆಕೆಯ ಕೆಟ್ಟ ಹೇರ್ ಕಟ್ ಮತ್ತು ಅವರು ಅರ್ಬನ್ ನಕ್ಸಲ್ ಆಗಿರುತ್ತಾರೆ- ಎಂದು ಸಾಮಾಜಿಕ ಹೋರಾಟಗಾರ್ತಿ, ಲೇಖಕಿಯರು, ಪತ್ರಕರ್ತೆ ಸೇರಿದಂತೆ ಪ್ರಮುಖ ಮಹಿಳೆಯರ ಫೋಟೊ ಕೊಲಾಜ್‍ವೊಂದನ್ನು ಮೋದಿ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ ಮಾಡಿದ ವ್ಯಕ್ತಿಯ ಹೆಸರು ರಾಜ್ ಆನಂದ್. ಇವರ ಟ್ವಿಟರ್ ಖಾತೆ (@rajanandbjp) ಯಲ್ಲಿರುವ ಮಾಹಿತಿ ಪ್ರಕಾರ  ಓದಿದ್ದು ಇಂಜಿನಿಯರಿಂಗ್, ಮೂಲ ಬೆಂಗಳೂರು, ಮೋದಿಯವರ ಹೆಮ್ಮೆಯ ಅಭಿಮಾನಿ.

ರಾಜ್ ಆನಂದ್ ಅವರ ಈ ಟ್ವೀಟ್‍ಗೆ ಟಾಂಗ್ ನೀಡಿದ ರಮ್ಯಾ
ತುಂಬಾ ಸುಂದರ ಹಾಗೂ ಗಿಟ್ಟಿಗಿತ್ತಿಯರು ಒಂದೇ ಫ್ರೇಮ್ ನಲ್ಲಿ. ಇದನ್ನೆಲ್ಲಾ ನಿಮಗೆ ನೋಡಲಾಗುವುದಿಲ್ಲ ಅಲ್ಲವೇ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. 

ಇತ್ತ, ರಮ್ಯಾ ಅವರು ಟಾಂಗ್ ಕೊಟ್ಟಿದ್ದರ ಬೆನ್ನಲ್ಲೇ  ಸಾವನ್ ಎಂಬ ಹೆಸರಿನ ವ್ಯಕ್ತಿಯೊಬ್ಬರು (@savan6454) ಎಂಬ ದಿವ್ಯ ಸ್ಪಂದನ ಬಗ್ಗೆ ನಿಮಗೇನು ಗೊತ್ತು ಎಂಬ ಟ್ವಿಟರ್ ಪೋಲ್ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !