ಗುರುವಾರ , ಆಗಸ್ಟ್ 22, 2019
26 °C

ಮೊಕದ್ದಮೆ ರದ್ದು: ಗೊಂದಲದ ಹೇಳಿಕೆ

Published:
Updated:

ಬೆಂಗಳೂರು: ಟಿಪ್ಪು ಜಯಂತಿ ಮತ್ತು ಇತರ ಪ್ರಕರಣಗಳಲ್ಲಿ ಹಿಂದೂ ಯುವಕರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎನ್ನಲಾದ ಹೇಳಿಕೆಗಳ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಬಿಜೆಪಿಯ ಹಿರಿಯ ಶಾಸಕ ಕೆ.ಎಸ್‌.ಈಶ್ವರಪ್ಪ ಅವರು ಟ್ವಿಟ್‌ ಮೂಲಕ ಯಡಿಯೂರಪ್ಪ ಅವರನ್ನು ಅಭಿನಂದಿಸಿದ್ದಾರೆ. ಆದರೆ, ‘ಯಾವುದೇ ಮೊಕದ್ದಮೆಗಳನ್ನು ಕೈಬಿಟ್ಟಿಲ್ಲ. ಆದೇಶವನ್ನೂ ಹೊರಡಿಸಿಲ್ಲ’ ಎಂದು ಗೃಹ ಕಾರ್ಯದರ್ಶಿ ರಜನೀಶ್‌ ಗೋಯಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಪ್ರಕರಣಗಳಲ್ಲಿ ಅಮಾಯಕ ಹಿಂದೂ ಯುವಕರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು, ಅವುಗಳನ್ನು ಕೈ ಬಿಡಬೇಕು ಎಂದು ಕೆ.ಜಿ.ಬೋಪಯ್ಯ, ಆರಗ ಜ್ಞಾನೇಂದ್ರ ಮತ್ತಿತರ ಶಾಸಕರು ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಸುಮಾರು 2,000 ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಕೈಬಿಡಲಾಗಿದೆ ಎಂದು ಬಿಜೆಪಿ ಶಾಸಕರು ಹೇಳಿಕೊಂಡಿದ್ದಾರೆ.

Post Comments (+)