ಗುರುವಾರ , ಆಗಸ್ಟ್ 13, 2020
21 °C

ಇರಾನ್‌ನ ಭದ್ರತಾ ಪಡೆಗೆ ಉಗ್ರ ಸಂಘಟನೆ ಪಟ್ಟ: ಅಮೆರಿಕ ಚಿಂತನೆ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಇರಾನ್‌ನ ಸೇನೆಯ ಭಾಗವಾಗಿರುವ ರೆವಲ್ಯೂಷನರಿ ಗಾರ್ಡ್‌ ಅನ್ನು ‘ವಿದೇಶಿ ಭಯೋತ್ಪಾದಕ ಸಂಘಟನೆ’ಯ ಪಟ್ಟಿಗೆ ಸೇರಿಸಲು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಆಡಳಿತ ಚಿಂತನೆ ನಡೆಸಿದೆ.

ಜಾಗತಿಕ ಮಟ್ಟದಲ್ಲಿ ಇರಾನ್‌ನನ್ನು ಏಕಾಂಗಿಯಾಗಿಸಲು ಅಮೆರಿಕ ಈ ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಶೀಘ್ರ ಘೋಷಣೆ ಹೊರಬೀಳಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. 

ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಲು ಮತ್ತು ಅದಕ್ಕೆ ಯಾವುದೇ ರೀತಿಯ ಸಹಕಾರ ಲಭಿಸದಂತೆ ನಿರ್ಬಂಧಿಸಲು ಚಿಂತನೆ ನಡೆಸಲಾಗಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.    

ಬರಾಕ್‌ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ ಇರಾನ್‌ ಜೊತೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು 2018 ಮೇ ತಿಂಗಳಲ್ಲಿ ಟ್ರಂಪ್‌ ರದ್ದು ಮಾಡಿದ್ದರು.

ಇರಾನ್‌ನ ತೈಲ ಮತ್ತು ಬ್ಯಾಂಕಿಂಗ್‌ ವಲಯವನ್ನು ಗುರಿಯಾಗಿಸಿ ಅಮೆರಿಕ ಈಗಾಗಲೇ ನಿರ್ಬಂಧಗಳನ್ನು ಹೇರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು