ಎಚ್‌1–ಬಿ ವೀಸಾದಲ್ಲಿ ಬದಲಾವಣೆ

7

ಎಚ್‌1–ಬಿ ವೀಸಾದಲ್ಲಿ ಬದಲಾವಣೆ

Published:
Updated:

ವಾಷಿಂಗ್ಟನ್‌: ಪ್ರತಿಭಾವಂತ ವೃತ್ತಿಪರರನ್ನು ಆಕರ್ಷಿಸಲು ಎಚ್1–ಬಿ ವೀಸಾದಲ್ಲಿ ಭಾರಿ ಬದಲಾವಣೆ ತರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ಎಚ್‌1–ಬಿ ವೀಸಾದಲ್ಲಿನ ಬದಲಾವಣೆಯಿಂದ ಅಮೆರಿಕದಲ್ಲಿ ನೆಲೆಸಲು ಅವಕಾಶ ದೊರೆಯುತ್ತದೆ. ಜತೆಗೆ ಪೌರತ್ವ ಪಡೆಯುವುದಕ್ಕೂ ದಾರಿಯಾಗಲಿದೆ. ಇದು ಅತ್ಯಂತ ಸರಳವಾಗಿರಲಿದೆ. ಪ್ರತಿಭಾವಂತರು ಮತ್ತು ಅತ್ಯುತ್ತಮ ಕೌಶಲ ಹೊಂದಿರುವವರನ್ನು ಪ್ರೋತ್ಸಾಹಿಸಲು ಈ ಕ್ರಮಕೈಗೊಳ್ಳಲಾಗಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಟ್ರಂಪ್‌ ಅವರ ಈ ನಿರ್ಧಾರದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಭಾರತೀಯ ವೃತ್ತಿಪರರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ಪಡೆಯಲು ಅಥವಾ ಶಾಶ್ವತವಾಗಿ ಕಾನೂನುಬದ್ಧವಾಗಿ ವಾಸಿಸಲು ದಶಕಗಳ ಕಾಲ ಭಾರತೀಯರು ಕಾಯಬೇಕಾಗಿದೆ.

ಯೋಧರು ವಾಪಸ್‌
ಬೈರೂತ್‌ (ಎಎಫ್‌ಪಿ):
‘ಸಿರಿಯಾದಿಂದ ಅಮೆರಿಕ ಸೇನಾ ತುಕಡಿಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ’ ಎಂದು ವಕ್ತಾರ ಕರ್ನಾಲ್‌ ಸೀನ್‌ ರಯಾನ್‌ ಹೇಳಿದ್ದಾರೆ. 

ಜಿಹಾದಿ ನಿಗ್ರಹ ಪಡೆ ನಿಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.  ಕಾರ್ಯಾಚರಣೆಯ ಸುರಕ್ಷತೆ ದೃಷ್ಟಿಯಿಂದ ಯಾವ ಸ್ಥಳದಿಂದ ಸೇನಾ ತುಕಡಿ ಹಿಂಪಡೆಯಲಾಗಿದೆ ಎಂಬ ಮಾಹಿತಿ, ಸಮಯ ಮತ್ತು ಯೋಧರ ಚಲನವಲನಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !