ವಿದ್ಯಾಪೋಷಕ: ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ
ವಿಜಯಪುರ: ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.
ಎಸ್ಸೆಸ್ಸೆಲ್ಸಿ ನಂತರ ಕಲಾ, ವಾಣಿಜ್ಯ, ಡಿಪ್ಲೊಮಾ, ಐಟಿಐ, ಜಿಟಿಟಿಸಿ ವಿಭಾಗಗಳಿಗೆ ಪ್ರವೇಶ ಬಯಸುವವರು ಕನಿಷ್ಠ 80% ಅಂಕ ಗಳಿಸಿರಬೇಕು. ಕುಟುಂಬದ ವರಮಾನ ₹ 80,000ಕ್ಕಿಂತ ಕಡಿಮೆಯಿರಬೇಕು.
ಪಿಯುಸಿ ಬಳಿಕ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲಿಚ್ಚಿಸುವವರು ಸಿ.ಇ.ಟಿ ಯಲ್ಲಿ 10000ದೊಳಗಿನ ರ‍್ಯಾಂಕ್, ನೀಟ್‌ನಲ್ಲಿ 2000ದೊಳಗಿನ ರ‍್ಯಾಂಕ್, ಪಡೆದಿರಬೇಕು. ವಾರ್ಷಿಕ ವರಮಾನ ₹ 1.20 ಲಕ್ಷಕ್ಕಿಂತ ಕಡಿಮೆಯಿರಬೇಕು.
ವಿದ್ಯಾ ಪೋಷಕದ ವೆಬ್‌ಸೈಟ್‌ನಿಂದ (www.vidyaposhak.ngo) ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಅವಶ್ಯಕವಿರುವ ಮಾಹಿತಿಗಳನ್ನು ತುಂಬಿ ಹಾಗೂ ಅಗತ್ಯವಿರುವ ದಾಖಲೆಗಳನ್ನು (ಅಂಕಪಟ್ಟಿಯ ನಕಲು ಪ್ರತಿ) ಲಗತ್ತಿಸಿ, ಸಮೀಪದ ವಿದ್ಯಾಪೋಷಕ ಕಚೇರಿಗೆ ಜೂನ್ 30ರೊಳಗೆ ಕಳುಹಿಸಿ ಕೊಡಬೇಕು.
ಮಾಹಿತಿಗಾಗಿ 9972719853 ಸಂಪರ್ಕಿಸಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.