ಮಂಗಳವಾರ, ಆಗಸ್ಟ್ 4, 2020
24 °C

ಕೈಕೊಟ್ಟ ಮಳೆ: 480 ಹೆಕ್ಟೇರ್ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಕೊಟ್ಟ ಮಳೆ: 480 ಹೆಕ್ಟೇರ್ ಬಿತ್ತನೆ

ದೇವದುರ್ಗ: ಈ ಬಾರಿ ಮುಂಗಾರು ಮಳೆ ವಿಫಲತೆ ಸೇರಿದಂತೆ ಕಳೆದ 9 ತಿಂಗಳಲ್ಲಿ ನಿರೀಕ್ಷೆ ತಕ್ಕಂತೆ ಮಳೆ ಬೀಳದೆ ಇರುವುದರಿಂದ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಕುಟುಂತಗೊಂಡಿದ್ದು, ಜೂನ್ 10ರವರೆಗೆ 129 ಮೀಮೀ ಮಳೆಯನ್ನು ನಿರೀಕ್ಷಿಸಲಾಗಿತ್ತು ಆದರೆ ಕೇವಲ 46ಮೀಮೀ ಮಳೆ ಬಂದಿರುವುದರಿಂದ ರೈತರಿಗೆ ತೊಂದರೆ ಎದುರಾಗಿದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ಮಹಾದೇವಪ್ಪ ತಿಳಿಸಿದರು.ಸೋಮವಾರ ಪಟ್ಟಣದ ಗುರುಭವನದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಅವರು ಮುಂಗಾರು ಹಂಗಾಮಿಗೆ ಸಂಬಂಧಿಸಿದ ಮಾಹಿತಿ ಸಭೆಗೆ ತಿಳಿಸಿದರು.ಈ ಬಾರಿ ಉತ್ತಮ ಮಳೆಯಾಗಿದ್ದರೆ 58620 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿತ್ತು ಆದರೆ ಮಳೆಯ ಅಭಾವದಿಂದಾಗಿ ಕೇವಲ 480 ಹೇಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. 18850 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದರೂ 21 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ತಾಲ್ಲೂಕಿಗೆ ಮಂಜೂರಾಗಿದೆ. ಹಂತ, ಹಂತವಾಗಿ ದಾಸ್ತಾನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ಇಲಾಖೆಯಿಂದ ಮಂಜೂರಾದ ಕಣ ಕಟ್ಟೆಗಳ ಬಗ್ಗೆ ಯಾರೊಬ್ಬರಿಗೂ ಮಾಹಿತಿ ಇಲ್ಲದೆ ನೀಡಲಾಗಿರುವುದು ಸೇರಿದಂತೆ ಇತರ ಯೋಜನೆಗಳ ಬಗ್ಗೆ ಮಾಹಿತಿ ನೀಡದೆ ಕಚೇರಿಗೆ ಬರುವುದೇ ಅಪರೂಪವಾಗಿದ್ದು, ಯೋಜನೆ ಬಳಕೆಯ ಬಗ್ಗೆ ತನಿಖೆ ನಡೆಸಬೇಕೆಂದು ಮಲದಕಲ್ ತಾಪಂ ಸದಸ್ಯ ಶ್ರೀನಿವಾಸ ದೇಸಾಯಿ ಅವರು ಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೊಡಿಸಿದರು.ಕಳೆದ 2011-12ನೇ ಸಾಲಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಿಡುಗಡೆಯಾಗಿದ್ದ 6.5 ಲಕ್ಷ ರೂಪಾಯಿ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗಿರುವ ಬಗ್ಗೆ ಖುದ್ದಾಗಿ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ. ಸುರೇಶಗೌಡ ಸಭೆಗೆ ತಿಳಿಸುತ್ತಿದ್ದಂತೆ ಅಧ್ಯಕ್ಷರು ಮತ್ತು ಜಿಪಂ ಸದಸ್ಯ ಪ್ರಕಾಶ ಪಾಟೀಲ ಅವರು ವೈದ್ಯಾಧಿಕಾರಿಯನ್ನು ಹಿಗ್ಗಮುಗ್ಗವಾಗಿ ತರಾಟೆಗೆ ತೆಗೆದುಕೊಮಡ ಪ್ರಸಂಗ ನಡೆಯಿತು. ಆಸ್ಪತ್ರೆ ಕಾಲು ಇಟ್ಟರೆ ಗಬ್ಬೇದ್ದು ನಾರುತ್ತಿದೆ. ರಾತ್ರಿ 10ಗಂಟೆಯಾದರೆ ಸಾಕು ಯಾರೊಬ್ಬರೂ ವೈದ್ಯರು ಇರುವುದಿಲ್ಲ ಇದಕ್ಕೆಲ್ಲ ಬೇಸೆತ್ತು ಜನರು ವಾಪಸ್ ಹೋಗುವಂಥ ಘಟನೆಗೆ ವೈದ್ಯರೇ ಕಾರಣ ಎಂದು ದೂರಿದರು.ಶಿಕ್ಷಕರ ಕೊರತೆ: ತಾಲ್ಲೂಕಿನಲ್ಲಿ ಈ ಬಾರಿ ವರ್ಗಾವಣೆ ಸೇರಿದಂತೆ ಒಟ್ಟು 450 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು. ಪ್ರಾಥಮಿಕ ಸೇರಿದಂತೆ ಪ್ರೌಢ ಶಾಲೆಯ ಒಟ್ಟು 62 ಜನ ಶಿಕ್ಷಕರು ಬೇರೊಂದು ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಖಾಲಿಯಾದ ಸ್ಥಳಕ್ಕೆ ಬೇರೊಬ್ಬರು ಬರುವರಿಗೂ ಯಾವುದೇ ಕಾರಣಕ್ಕೂ ವರ್ಗಾವಣೆಯಾದ ಶಿಕ್ಷಕರನ್ನು ಬಿಡುಗಡೆಗೊಳಿಸಬಾರದು ಎಂದು ಜಿಪಂ ಸದಸ್ಯ ಪ್ರಕಾಶ ಪಾಟೀಲ ಮತ್ತು ತಾಪಂ ಅಧ್ಯಕ್ಷ ಲಕ್ಷ್ಮಣ ರಾಠೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಕೀತು ಮಾಡಿದರು. ಇದಕ್ಕೆ ಉಲ್ಲಂಘನೆ ಕಂಡು ಬಂದರೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಸೈಕಲ್ ಭಾಗ್ಯ: ಈ ಬಾರಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಸೈಕಲ್ ವಿತರಣೆಯ ಸಂದರ್ಭದಲ್ಲಿ ವಸತಿ ನಿಲಯ ವಿದ್ಯಾರ್ಥಿಗಳಿಗೂ ಸೈಕಲ್ ನೀಡಬೇಕೆಂಬ ಬಗ್ಗೆ ಚರ್ಚೆ ನಡೆದಿದ್ದು, ಈ ಬಗ್ಗೆ ಕ್ರಿಯಾ ಯೋಜನೆ ತಯಾರು ನಡೆದಿದೆ ಎಂದರು.ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಬಾಲಮ್ಮ ಹನುಮಂತ್ರಾಯ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಯ್ಯಸ್ವಾಮಿ, ತಾಪಂ ಇಒ ನಾಮದೇವ ರಾಠೋಡ್ ಹಾಗೂ ತಾಪಂ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು        

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.